ತಾಯಿಯನ್ನೇ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಚ್ಚಿಟ್ಟ ಮಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಕಳೆದ ಡಿಸೆಂಬರ್​ನಲ್ಲಿ ನಡೆದ ಮಹಿಳೆಯೊಬ್ಬಳ ಕೊಲೆ ಸಂಬಂಧ ಆರೋಪಿ ಮಗಳು ಪೋಲೀಸರ ಬಲೆಗೆ ಬಿದ್ದಿದ್ದಾರೆ.
ವೀಣಾ(55) ಮಗಳಿಂದ ಹತ್ಯೆಗೀಡಾದ ಮಹಿಳೆ. ರಿಂಪಲ್ ಜೈನ್(24) ಕೊಲೆ ಆರೋಪಿ.

ಮಹಾರಾಷ್ಟ್ರದ ಕಲಾಚೌಕಿ ವ್ಯಾಪ್ತಿಯ ರಿಂಪಲ್ ಜೈನ್ ಎಂಬಾಕೆ ತನ್ನ ತಾಯಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ, ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾಳೆ. ಶವ ಕೊಳೆತು ವಾಸನೆ ಬರಬಾರದೆಂದು 200ಕ್ಕೂ ಅಧಿಕ ಸುಗಂಧದ್ರವ್ಯ ಹಾಗೂ ರೂಂ ಪ್ರಶ್ನರ್​ಗಳನ್ನು ಬಳಸಿದ್ದಾಳೆ. ತನ್ನ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂದು ರಿಂಪಲ್, ತನ್ನ ಮನೆಯ ನೆರೆಹೊರೆಯ ಮಂದಿಯೊಂದಿಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಂಗಳವಾರ ರಾತ್ರಿ ರಿಂಪಲ್ ಜೈನ್​ಳ ಸೋದರ ಸಂಬಂಧಿ ಹಣ ಕೊಡಲು ಬಂದಾಗ, ತಾಯಿ ಎಲ್ಲಿದ್ದಾಳೆ ಎಂದು ವಿಚಾರಿಸಿದ್ದಾರೆ. ಈ ವೇಳೆ ತಾಯಿ ಕಾನ್ಪುರಕ್ಕೆ ಹೋಗಿರುವಾಗಿ ತಿಳಿಸಿದ್ದಾಳೆ. ಆದರೆ ಅನುಮಾನ ಬಂದ ಸಂಬಂಧಿ ಮನೆಗೆ ಹಿಂತಿರುಗಿ, ತನ್ನ ಮಗನಲ್ಲಿ ಹೇಳಿದ್ದಾರೆ. ಬಳಿಕೆ ಇಬ್ಬರು ರಿಂಪಲ್ ಮನೆಗೆ ಬಂದಾಗ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ. ಕೊನೆಗೆ ನೆರೆಮಂದಿಯ ಸಹಾಯದೊಂದಿಗೆ ಮನೆ ಪ್ರವೇಶಿಸಿದಾಗ ಕೊಳೆತ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಮನೆಯನ್ನು ಪರಿಶೀಲಿಸಿದಾಗ ವೀಣಾ ಕೊಲೆಯಾಗಿ ಹೋಗಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ವಿವಿಧೆಡೆ ಮೃತದೇಹದ ಕತ್ತರಿಸಿದ ಭಾಗಗಳು ಪತ್ತೆಯಾಗಿದೆ. ಟೈಲ್ಸ್​ ಕತ್ತರಿಸುವ ಯಂತ್ರದಿಂದ ರಿಂಪಲ್ ತನ್ನ ತಾಯಿಯ ಮೃತದೇಹವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here