CRIME | ಗೋಣಿಚೀಲ, ಸೊಪ್ಪುಗಳಿಂದ ಮುಚ್ಚಿಟ್ಟಿದ್ದ ವ್ಯಕ್ತಿಯ ಶವ ಪತ್ತೆ

ಹೊಸದಿಗಂತ ವರದಿ ಬನವಾಸಿ:

ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯ ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಗ್ರಾಮದ ಅರಣ್ಯದಲ್ಲಿ ಪುರುಷನ ಶವ ಶುಕ್ರವಾರ ಪತ್ತೆಯಾಗಿದೆ. ಯಾರೋ ಕೊಲೆ ಮಾಡಿ ಶವವನ್ನು ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಶವದ ಮೇಲೆ ಎರಡು ಗೋಣಿ ಚೀಲ ಮತ್ತು ಸೊಪ್ಪುಗಳಿಂದ ಮುಚ್ಚಿದ್ದಾರೆ.

ಸುಮಾರು 45ರಿಂದ 50ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ಎಡಗಾಲಿನ 2ನೇ ಬೆರಳಿಗೆ ಬೆಳ್ಳಿ ನಮೂನೆಯ ಉಂಗುರ ಹಾಕಿರುತ್ತಾನೆ. ಬಿಳಿ ಪಂಚೆ, ಬಿಳಿ ಅಂಗಿ, ಕಾಫಿ ಬಣ್ಣದ ನಿಕ್ಕರ್ ಹಾಗೂ ಬಲ ಕೈಯಲ್ಲಿ ಕೆಂಪು ದಾರ ಇದೆ. ವ್ಯಕ್ತಿಯ ಪತ್ತೆಯಾದಲ್ಲಿ ಬನವಾಸಿ ಪೋಲಿಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪಿಎಸ್ಐ ಚಂದ್ರಕಲಾ ಪತ್ತಾರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!