ಹೊಸದಿಗಂತ ವರದಿ, ಮುಂಡಗೋಡ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ಸ್ನೇಹಿತರು ಜೊತೆ ಈಜಲು ತರಳಿದ್ದ ಭಟ್ಕಳನ ನಿವಾಸಿ ವಿನಾಯಕ(25) ಎಂಬಾತ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದು, ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆದಿದೆ.
ಭಟ್ಕಳ ತಾಲೂಕಿನ ಶಿರಾಲಿ ನಿವಾಸಿ ವಿನಾಯಕ ಮತ್ತು ಸ್ನೇಹಿತರು ಬುಧವಾರ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಬಂದು ದೇವಿಯ ದರ್ಶನ ಪಡೆದ ನಂತರ ತಾಲೂಕಿನ ಮಳಗಿ ಜಲಾಶಯಕ್ಕೆ ಬಂದಿದ್ದರು ಎನ್ನಲಾಗಿದೆ. ಅಲ್ಲಿಗೆ ಆಗಮಿಸಿದ 6 ಜನರ ಗುಂಪಿನಲ್ಲಿ ಇಬ್ಬರು ಜಲಾಶಯಕ್ಕೆ ಇಳಿದು ಈಜಲು ಹೋಗಿದ್ದರು. ಇದರಲ್ಲಿ ವಿನಾಯಕ ಎಂಬಾತ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ನೀಡಿದ್ದಾರೆ. ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ