Thursday, August 18, 2022

Latest Posts

ಭರ್ಜರಿ ಸದ್ದು ಮಾಡುತ್ತಿದೆ ‘777 ಚಾರ್ಲಿ’ ಸಿನಿಮಾದ ಡಿಲೀಟೆಡ್ ಸೀನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನುಷ್ಯ ಹಾಗೂ ಶ್ವಾನದ ನಡುವಿನ ಅವಿನಾಭಾವ ಸಂಬಂಧ ಹೊಂದಿರುವ ಕಸಿನಿಮಾ ‘777 ಚಾರ್ಲಿ’. ಧರ್ಮ ಹಾಗೂ ಚಾರ್ಲಿ ನಡುವಿನ ಹೃದಯಸ್ಪರ್ಶಿ ಕಥಾನಕಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ‘777 ಚಾರ್ಲಿ’ ಬಿಡುಗಡೆಯಾದ 25 ದಿನಗಳಲ್ಲಿ 150 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದೀಗ ಚಿತ್ರತಂಡ ಒಂದು ವಿಶೇಷ ದೃಶ್ಯವನ್ನು ಬಿಡುಗಡೆ ಮಾಡಿದೆ.
‘777 ಚಾರ್ಲಿ’ ಸಿನಿಮಾದಿಂದ ಡಿಲೀಟ್ ಆಗಿರುವ ದೃಶ್ಯವೊಂದನ್ನು ನಿರ್ದೇಶಕ ಕಿರಣ್ ರಾಜ್ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆದ್ರಿಕಾಳ 7ನೇ ವರ್ಷದ ಹುಟ್ಟುಹಬ್ಬವನ್ನು ಧರ್ಮ ಹಾಗೂ ಚಾರ್ಲಿ ಸೆಲೆಬ್ರೇಟ್ ಮಾಡಿದೆ.

ದೃಶ್ಯದಲ್ಲಿ ಏನಿದೆ?
ಶ್ವಾನ ಚಾರ್ಲಿ ಕಂಡ್ರೆ ಆದ್ರಿಕಾಗೆ ಸಿಕ್ಕಾಪಟ್ಟೆ ಪ್ರೀತಿ. ಕಾಲೋನಿಯಲ್ಲಿ ಆದ್ರಿಕಾಳ 7ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಧರ್ಮ ಮತ್ತು ಚಾರ್ಲಿ ಕೂಡ ಬಂದು ಆದ್ರಿಕಾಗೆ ಬರ್ತ್‌ಡೇ ವಿಶ್ ಮಾಡಿ, ಗಿಫ್ಟ್ ಕೊಡುತ್ತಾರೆ. ಚಾರ್ಲಿಗೆ ಆದ್ರಿಕಾ ಕೇಕ್ ತಿನ್ನಿಸುತ್ತಾಳೆ. ಚಾರ್ಲಿ ಹಾಗೂ ಆದ್ರಿಕಾ ಜೊತೆ ಧರ್ಮ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಾರೆ. ಅಸಲಿಗೆ, ಈ ದೃಶ್ಯವನ್ನು ‘777 ಚಾರ್ಲಿ’ ಚಿತ್ರದಿಂದ ಡಿಲೀಟ್ ಮಾಡಲಾಗಿತ್ತು. ಇದೀಗ ಅದೇ ದೃಶ್ಯವನ್ನು ಕಿರಣ್ ರಾಜ್ ಬಿಡುಗಡೆ ಮಾಡಿದ್ದಾರೆ.

ಚಿತ್ರದಿಂದ ಡಿಲೀಟ್ ಯಾಕೆ ಮಾಡಿದ್ದು?
ಆದ್ರಿಕಾಳ ಬರ್ತ್‌ಡೇ ಪಾರ್ಟಿ ದೃಶ್ಯವನ್ನು ಚಿತ್ರದಲ್ಲಿ ಯಾಕೆ ಸೇರಿಸಲಿಲ್ಲ ಎಂಬುದರ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಮಾಹಿತಿ ನೀಡಿಲ್ಲ. ಆದರೆ, ‘ಈ ದೃಶ್ಯವನ್ನು ಸಿನಿಮಾದಲ್ಲಿ ಸೇರಿಸಬಹುದಿತ್ತು. ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು. ಕಾಲೋನಿಯಲ್ಲಿ ಶ್ವಾನಗಳ ಬಗ್ಗೆ ಇದ್ದ ಅಭಿಪ್ರಾಯ ಬದಲಾಗುವಂತೆ ಮಾಡಬಹುದಿತ್ತು’ ಎಂದು ಪ್ರೇಕ್ಷಕರು ಟ್ವೀಟ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!