October 7, 2026
Wednesday, October 7, 2026
spot_img

ನೈಸರ್ಗಿಕ ಹಣ್ಣಿನ ಸವಿರುಚಿ.. ಮನೆಯಲ್ಲೇ ಮಾಡಿ ಮಕ್ಕಳ ನೆಚ್ಚಿನ ಬಣ್ಣ ಬಣ್ಣದ ‘ಐಸ್ ಪಾಪ್ಸ್’

ಬೇಕಾಗುವ ಪದಾರ್ಥಗಳು

ನಿಮ್ಮಿಷ್ಟದ ಹಣ್ಣುಗಳು (ಮಾವಿನಹಣ್ಣು, ಕಲ್ಲಂಗಡಿ, ಸ್ಟ್ರಾಬೆರಿ, ಕಿವಿ)

ನಿಂಬೆ ರಸ

ಸಕ್ಕರೆ

ಎಳೆನೀರು

ಮಾಡುವ ವಿಧಾನ

ಆಯ್ಕೆ ಮಾಡಿದ ಹಣ್ಣುಗಳನ್ನು ತೊಳೆದು, ಸಣ್ಣಗೆ ಹೆಚ್ಚಿ ಮಿಕ್ಸಿ ಜಾರಿಗೆ ಹಾಕಿ ಸಕ್ಕರೆ, ನಿಂಬೆ ರಸ ಮತ್ತು ಎಳೆನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಐಸ್ ಕ್ರೀಮ್ ಮೌಲ್ಡ್‌ಗೆ ಹಾಕಿ. ಮೌಲ್ಡ್ ಇಲ್ಲದಿದ್ದರೆ ಚಿಕ್ಕ ಸ್ಟೀಲ್ ಲೋಟ ಅಥವಾ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸಬಹುದು. ಮಧ್ಯದಲ್ಲಿ ಐಸ್ ಕ್ರೀಮ್ ಕಡ್ಡಿಯನ್ನು ಇಟ್ಟು, ಫ್ರಿಡ್ಜ್ ನಲ್ಲಿ 7 ರಿಂದ 8 ಗಂಟೆಗಳ ಕಾಲ ಗಟ್ಟಿಯಾಗಲು ಬಿಡಿ. ನಂತರ ಮೌಲ್ಡ್ ಅನ್ನು 10 ಸೆಕೆಂಡುಗಳ ಕಾಲ ನೀರಿನಲ್ಲಿಟ್ಟು ಹೊರತೆಗೆದರೆ, ತಂಪಾದ, ರುಚಿಯಾದ ಹೋಮ್ ಮೇಡ್ ಐಸ್ ಪಾಪ್ಸ್ ಸಿದ್ಧ!

Must Read