ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ಹಾಗೂ ಅಜಿತ್ ಪವಾರ್ ಬಣದ ಶಾಸಕ ನರಹರಿ ಜಿರ್ವಾಲ್ ಸಚಿವಾಲಯದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ಕೆಳಗ್ಗೆ ನೆಟ್ ಅಳವಡಿಸಿದ್ದ ಕಾರಣ ಅವರು ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಧಂಗಾರ್ ಸಮುದಾಯದ ಎಸ್ಟಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಈ ಘಟನೆ ನಡೆದಿದೆ.
ಹಾರಿದ ಬಳಿಕ ನೆಟ್ನಲ್ಲಿ ಸಿಲುಕಿದ್ದ ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ನರಹರಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಲು ಬಂದಿದ್ದರು, ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಇದಾದ ಬಳಿಕ ಶುಕ್ರವಾರವೂ ಸಿಎಂ ಭೇಟಿಗೆ ತೆರಳಿದ್ದು, ಸಿಎಂ ಸಿಗಲಿಲ್ಲ.
ನರಹರಿ ಜೊತೆಗೆ ಇನ್ನೂ ಕೆಲವರು ನೆಟ್‌ಗೆ ಹಾರಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಬುಡಕಟ್ಟು ಶಾಸಕರೂ ಇದ್ದರು. ಎಲ್ಲ ಶಾಸಕರು ನೆಟ್‌ನಲ್ಲಿಯೇ ನಿಂತು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಉಪಸಭಾಪತಿ ತಮ್ಮ ಸರ್ಕಾರದ ಮೇಲೆಯೇ ಕೋಪಗೊಂಡು ಸಿಟ್ಟಿನ ಭರದಲ್ಲಿ ಈ ಹೆಜ್ಜೆ ಇಟ್ಟಿದ್ದಾರೆ.
ಆದರೆ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ಛಾವಣಿಯಿಂದ ಕೆಳಗೆ ಜಿಗಿದ ನಂತರ ಯಾವುದೇ ಗಾಯವೂ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಗಿದ ಬಳಿಕ ಕೆಳಗಿದ್ದ ಬಲೆಯಲ್ಲಿ ಸಿಲುಕಿದ್ದರಿಂದ ಬಚಾವಾಗಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು.
#WATCH | NCP leader Ajit Pawar faction MLA and deputy speaker Narhari Jhirwal jumped from the third floor of Maharashtra’s Mantralaya and got stuck on the safety net. Police present at the spot. Details awaited pic.twitter.com/nYoN0E8F16
— ANI (@ANI) October 4, 2024