Monday, October 2, 2023

Latest Posts

VIRAL NEWS | ಟೈಟ್ ಆಗಿ ಬಂದು ಆಪರೇಷನ್ ಮಾಡೋಕೆ ಮುಂದಾದ ಡಾಕ್ಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನ ಕಳಸದ ಆಸ್ಪತ್ರೆಯಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಆಪರೇಷನ್ ಮಾಡಬೇಕಿದ್ದ ವೈದ್ಯರೇ ಮದ್ಯದ ಅಮಲಿನಲ್ಲಿ ತೇಲಾಡಿದ್ದು, ರೋಗಿಗಳು ಭಯಭೀತರಾಗಿದ್ದಾರೆ.

ಒಂಬತ್ತು ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬೆಳಗ್ಗೆ 9  ಗಂಟೆಗೆ ಅನಸ್ತೇಶಿಯಾ ನೀಡಲಾಗಿತ್ತು. ಮಧ್ಯಾಹ್ನ ಎರಡು ಗಂಟೆಯಾದರೂ ಆಪರೇಷನ್ ಮಾಡಿಲ್ಲ. ತದನಂತರ ವೈದ್ಯರು ಬಂದಿದ್ದು, ಆಪರೇಷನ್ ಮಾಡುವ ಸ್ಥಿತಿಯಲ್ಲೇ ಇರಲಿಲ್ಲ.

ಆದರೂ ಒಟಿಗೆ ಬಂದಿದ್ದು, ಅಲ್ಲೇ ಕುಸಿದು ಬಿದ್ದು ನಿದ್ದೆ ಮಾಡಿದ್ದಾರೆ. ಆಪರೇಷನ್‌ಗಾಗಿ ಅನಸ್ತೇಶಿಯಾ ಪಡೆದ ಮಹಿಳೆಯರು ಪರದಾಡಿದ್ದು, ಕುಟುಂಬಸ್ತರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!