ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಂತ್ನಾಗ್ನ ಶ್ರೀನಗರದಲ್ಲಿ ಭೂಕಂಪನ ನಡೆಯುತ್ತಿದ್ದಂತೆಯೇ ಹೆರಿಗೆ ಮಾಡಿಸಿ ಮಗು ಹಾಗೂ ತಾಯಿಯ ಜೀವವನ್ನು ಉಳಿಸಿದ್ದಾರೆ.
ಬಿಜ್ಬೆಹರಾದ ಎಸ್ಡಿಹೆಚ್ ಜಿಲ್ಲಾಸ್ಪತ್ರೆಯ ವೈದ್ಯರು ಲೋವರ್ ಸೆಗ್ಮೆಂಟ್ ಸಿಸೇರಿಯನ್ ಮೂಲಕ ಹೆರಿಗೆ ಮಾಡಿ ಮಗು ಹಾಗೂ ತಾಯಿಯ ಜೀವ ಉಳಿಸಿದ್ದಾರೆ.
ಹೆರಿಗೆ ಮಾಡಲು ಇನ್ನೇನು ಕೆಲವೇ ಕ್ಷಣ ಇದೆ ಎನ್ನುವಾಗ ಭೂಮಿ ಕಂಪಿಸಲು ಆರಂಭಿಸಿದೆ. ವೈದ್ಯರು ಭೂಕಂಪನಕ್ಕೆ ಹೆದರದೆ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ವೈದ್ಯರ ಕರ್ತವ್ಯನಿಷ್ಟೆಗೆ ಭೇಷ್ ಎಂದಿದ್ದಾರೆ.