ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯನ್ನು ಬೇಟೆಯಾಡಿದ ನಾಯಿಗಳು, ಗ್ರಾಮಸ್ಥರಿಂದ ರಕ್ಷಣೆ

ಹೊಸದಿಗಂತ ಯಲ್ಲಾಪುರ:

ಯಲ್ಲಾಪುರ ತಾಲೂಕಿನ ಕುಂದರಗಿ ಸಮೀಪದ ಭರತನಹಳ್ಳಿಯಲ್ಲಿ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಿಸಿದ್ದಾರೆ.

ಭರತನಹಳ್ಳಿಯತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನತ್ತಿ ತೀವೃ ಗಾಯಪಡಿಸಿದ್ದವು. ಗ್ರಾಮಸ್ಥರು ಕುಂದರಗಿಯ ಉಪವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಮತ್ತು ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಇಲಾಖೆಯವರು, ಗ್ರಾಮಸ್ಥರ ಸಹಕಾರದೊಂದಿಗೆ ಜಿಂಕೆಯನ್ನು ರಕ್ಷಿಸಿದರು. ಮಂಚೀಕೇರಿಯ ಪಶು ಆಸ್ಪತ್ರೆಗೆ ಜಿಂಕೆಯನ್ನು ಕರೆದೊಯ್ದು, ಅಗತ್ಯ ಚಿಕಿತ್ಸೆ ಕೊಡಿಸಿ, ಕಾಡಿಗೆ ಬಿಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!