ಹೊಸದಿಗಂತ ವರದಿ,ಮಳವಳ್ಳಿ:
ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಮೂವರು ದೇವಸ್ಥಾನಗಳ ಬಾಗಿಲು ಮುರಿದ ಕಳ್ಳರು ಚಿನ್ನಾಭರಣ ಹಾಗೂ ಹುಂಡಿ ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ಮನೆಯಮ್ಮ, ಮಾರಮ್ಮ, ರಕಸಮ್ಮ ದೇವಸ್ಥಾನಗಳ ಬಾಗಿಲು ಮುರಿದು ದೇವರ ಚಿನ್ನದ ತಾಳಿ, ಸಣ್ಣ ಪುಟ್ಟ ಚಿನ್ನದ ಆಭರಣಗಳು ಹಾಗೂ ಹುಂಡಿಗಳನ್ನು ಕಳ್ಳತನ ಮಾಡಿದ್ದಾರೆ. ಕಳವು ಮಾಡಿದ ಹುಂಡಿಗಳಲ್ಲಿ ಹಣ ತೆಗೆದುಕೊಂಡು ಹುಂಡಿಗಳನ್ನು ಎಸೆದು ಹೋಗಿದ್ದಾರೆ. ಬೆಳಗಿನ ಜಾವ ಗ್ರಾಮಸ್ಥರು ಬಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.