ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಜೋಗುಲಾಂಬ ಗದ್ವಾಲ್‌ಜಿಲ್ಲೆಯಲ್ಲಿ ಬಸ್‌ವೊಂದು ಪಲ್ಟಿ ಹೊಡೆದು ಬೆಂಕಿಗಾಹುತಿಯಾಗಿದೆ.
ಚಾಲಕನ ಅಜಾಗರೂಕತೆಯಿಂದಾಗಿ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿದೆ, ಬಸ್‌ನಲ್ಲಿದ್ದ ಮಹಿಳೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾರೆ.
ಮುಂಜಾನೆ ಮೂರು ಗಂಟೆ ಸುಮಾರಿಗೆ ಚಾಲಕನಿಗೆ ನಿದ್ದೆ ತಡೆಯಲಾಗಿಲ್ಲ. ಆದರೂ ಬಸ್ ನಿಲ್ಲಿಸದೇ ಪ್ರಯಾಣ ಮುಂದುವರಿದಿದ್ದು, ನಿದ್ದೆ ಮಂಪರಿನಲ್ಲಿ ಬಸ್ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಬೆಂಕಿ ಹೊತ್ತಿದೆ.
ಬಸ್‌ನಲ್ಲಿ ಒಟ್ಟಾರೆ 40 ಪ್ರಯಾಣಿಕರಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.