ಹೊಸದಿಗಂತ ವರದಿ ಕಲಬುರಗಿ :
ಬುರ್ಖಾ ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಬಸ್ ಹತ್ತಲು ಬಿಡದ ಬಸ್ ಚಾಲಕ ಮೆಹಬೂಬ್ ಪಟೇಲ್ ನನ್ನು ಕೆ.ಕೆ.ಆರ್.ಟಿ.ಸಿ. ಬೀದರ ವಿಭಾಗದ ಡಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬುರ್ಖಾ ಧರಿಸಿಯೇ ಬನ್ನಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್‌ನಿಂದ ಕೆಳಗಿಳಿಸಿದ್ದ
ಬಸವಕಲ್ಯಾಣ ಡಿಪೋ ಚಾಲಕ ಮೆಹಬೂಬ್ ಪಟೇಲ್ ವಿರುದ್ದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಚಾಲಕನನ್ನು ಅಮಾನತ್ತು ಮಾಡಲಾಗಿದೆ.
ಎರಡು ದಿನಗಳ ಹಿಂದೆ ಜಿಲ್ಲೆಯ ಕಮಲಾಪುರ ತಾಲೂಕಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರು
ಓಕಳಿ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವೇಳೆ
ಬಸ್ ಚಾಲಕ ಮೆಹಬೂಬ್ ಪಟೇಲ್, ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ನೀನು ಮುಸ್ಲಿಂ ಇದಿಯಲ್ವ. ಬುರ್ಖಾ ಧರಿಸಿ ಬಾ. ಆಗ ಮಾತ್ರ ಬಸ್ ಹತ್ತಲು ಬಿಡುತ್ತನೆ ಎಂದು ಹೇಳಿದ. ಏಕ ವಚನದಲ್ಲಿ ನಮ್ಮನ್ನು ಬೈಯ್ದು ಬಸ್ ನಿಂದ ಕೆಳಗಿಳಿಸಿದಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಈ ವೇಳೆ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಇದೀಗ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಚಾಲಕನನ್ನು ಸಸ್ಪೆಂಡ್ ಮಾಡಲಾಗಿದೆ.ಚಾಲಕನನ್ನು ಅಮಾನತು ಮಾಡಿರುವುದನ್ನು ಕೆಕೆಆರ್ಟಿಸಿ ಎಂಡಿ ಎಂ. ರಾಚಪ್ಪ ಅವರು ದೃಢಪಡಿಸಿದ್ದಾರೆ.