ಲಡಾಖ್‌ನಲ್ಲಿ ಎರಡು ಬಾರಿ ಕಂಪಿಸಿದ ಭೂಮಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಲಡಾಖ್ ನಲ್ಲಿ 8 ಗಂಟೆಯೊಳಗೆ ಎರಡು ಬಾರಿ ಭೂಮಿ ಕಂಪಿಸಿದ್ದು , ಮೊದಲ ಭೂಕಂಪನ ಬೆಳಿಗ್ಗೆ 8.25 ಕ್ಕೆ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿತ್ತು. ಎರಡನೇ ಭೂಕಂಪನ 4.29ಕ್ಕೆ ಸಂಭವಿಸಿದ್ದು , ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟು ದಾಖಲಾಗಿದೆ.

ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಮೊದಲ ಭೂಕಂಪವು ಇದರ ಕೇಂದ್ರವು 35.44 ಡಿಗ್ರಿ ಅಕ್ಷಾಂಶ ಮತ್ತು 77.36 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 10 ಕಿಲೋ ಮೀಟರ್ ಕೆಳಗೆ ಇತ್ತು. 3. 7ರ ತೀವ್ರತೆಯ ಎರಡನೇ ಭೂಕಂಪವು 35. 23 ಡಿಗ್ರಿ ಅಕ್ಷಾಂಶ ಮತ್ತು 77. 59 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 5 ಕಿಲೋಮೀಟರ್ ಕೆಳಗೆ ಇತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!