ಶಿಕ್ಷಣವನ್ನು ಪಡೆದ ಸಮುದಾಯ ಜಗತ್ತನ್ನು ಆಳುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಯಾವ ಸಮುದಾಯ ಶಿಕ್ಷಣದಲ್ಲಿ ಮುಂದೆ ಬರುತ್ತದೆಯೋ ಆ ಸಮುದಾಯ ಜಗತ್ತನ್ನು ಆಳುತ್ತದೆ. ಈ ಹಿನ್ನಲೆಯಲ್ಲಿ (3-ಇ) ಎಜುಕೇಶನ್, ಎಂಪ್ಲಾಯಮೆಂಟ್ ಹಾಗೂ ಎಂಪೋರಮೆಂಟ್ ಎಂಬ ದೃಷ್ಟಿಯನ್ನು ಇಟ್ಟುಕೊಂಡು ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗಂಜಗಟ್ಟಿ ಗ್ರಾಮದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಹಾಗೂ ಅಲ್ಪ ಸಂಖ್ಯಾತರಿಗೆ ಡಾ. ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ನೀಡಲಾಗಿದೆ. ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯಬೇಂಬ ಉದ್ದೇಶದಿಂದ ಶಿಕ್ಷಣಕ್ಕೆ ಅವಶ್ಯಕವಾದ ವಿದ್ಯಾರ್ಥಿನಿಲಯಗಳು ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಕೆಲಸಮಾಡುತ್ತಿದೆ ಎಂದರು.
ಭವಿಷ್ಯ ಬರೆಯುವಂತಹ ಶಿಕ್ಷಣ ವ್ಯವಸ್ಥೆಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೇವಲ ಶಿಕ್ಷಣ ಸಾಲದು ಉದ್ಯೋಗ ದೊರೆಯುವದಕ್ಕೆ ಕೌಶಲ್ಯಾಭಿವೃದ್ಧಿ ನೀಡುವುದಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಭಾವೈಕ್ಯಯನ್ನು ಸಾರಿದ ಕನಕದಾಸರು, ಸಂತ ಶಿಶುನಾಳ ಶರೀಫ ಹುಟ್ಟಿ ಬೆಳೆದ ನಾಡಿದು. ಸಂತರ ಭಾವೈಕ್ಯತೆಯ ಸಿಂಚನ, ಚಿಂತನಗಳನ್ನು ಆಧಾರವಾಗಿಟ್ಟುಕೊಂಡು ಅವರ ಮಾತನ್ನು ಅರ್ಥೈಸಿಕೊಂಕು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕುರುಬ ಸಮುದಾಯ ಕಾಯಕ, ಪ್ರಾಮಾಣಿಕ ಸಮುದಾಯ, ನನಗೆ ಸನ್ಮಾನ ನೀಡಿದ ಸಂದರ್ಭದಲ್ಲಿ ಕರಿ ಕಂಬಳಿಯನ್ನು ಇದು ರಕ್ಷಣೆಯ ರತ್ನವದು ಇದು ನನ್ನನ್ನು ರಕ್ಷೇ ಮಾಡುತ್ತದೆ ಎಂದು ನಾನು ನಂಬಿರುವೆ ಹಾಗೂ ಆರೋಗ್ಯವಂತ ಕುರಿ ಮರಿಯನ್ನು ನೀಡಿದ್ದಾರೆ. ಮಳೆ ಹಾಗೂ ಚಳಿಗಾಲದಲ್ಲಿ ಕುರಿ ಉಣ್ಣೆಯನ್ನು ನೀಡುವ ಮೂಲಕ ನಮ್ಮನ್ನು ರಕ್ಷಣೆ ಮಾಡುತ್ತದೆ. ನಮ್ಮ ದೇಹವನ್ನು ದಣಿಸಿ ಇತರರಿಗೆ ಪರೋಪಕಾರಿ ಆಗಬೇಕೆನ್ನುವುದೆ ಇದರ ಪಾರಮಾರ್ಥಿ ಅರ್ಥವಾಗಿದೆ ಇದನ್ನು ನಾನು ಎಂದೂ ಮರೆಯುವದಿಲ್ಲ. ಇದನ್ನು ನೆನಪಿನಲ್ಲಿಟ್ಟುಕೊಂಡು ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಶಿಗ್ಗಾಂವ ಪಟ್ಟಣ ಅಭಿವೃದ್ಧಿಗೆ ನಗರೋತ್ಥಾನದಡಿ ೧೦ ಕೋಟಿ ಹಾಗೂ ವಿಷೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ 10 ಕೋಟಿ ರೂಗಳನ್ನು ನೀಡಿದ್ದು ಎಲ್ಲ ಕೆಲಸ ಕಾರ್ಯಗಳು ಸದ್ಯದಲ್ಲೇ ಆರಂಭವಾಗಲಿವೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ 700 ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ. ಶಿಗ್ಗಾಂವ ತಾಲೂಕಿನ ವಿದ್ಯುತ್ ಸಮರ್ಪಕ ವಿತರಣೆಗೆ, ೨೨೦ ಕೆವಿ ಹಾಗೂ 110 ಕೆವಿ ಕೇಂದ್ರಗಳನ್ನು ಮಂಜೂರ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!