ಇಬ್ಬರು ಕ್ಷಿತಯ್ಯರ ಮತ ಪಡೆಯಲು ಬರೋಬ್ಬರಿ 107 ಕಿಮೀ ದೂರ ಸಂಚರಿಸಿದ ಚುನಾವಣಾ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾನದ ಬಗ್ಗೆ ಚುನಾವಣಾ ಆಯೋಗ ಎಷ್ಟು ಕಾಳಜಿವಹಿಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ!

ಇಬ್ಬರು ಮತದಾರಿಂದ ಮತದಾನ ಮಾಡಿಸಿಕೊಳ್ಳಲು ಇಲ್ಲಿ ಅಧಿಕಾರಿಗಳು ಬರೋಬ್ಬರಿ 107 ಕಿಲೋ ಮೀಟರ್ ದೂರ ಸಂಚರಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ರಾಮದ ಗಡ್ಚಿರೋಲಿ- ಚಿಮುರ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

ಈ ಕ್ಷೇತ್ರದಲ್ಲಿ ಏ. 19ರಂದು ಮತದಾನ ನಡೆಯಲಿದೆ. ಈ ನಡುವೆ ಮನೆಯಿಂದಲೇ ಮತದಾನ ಆರಂಭವಾಗಿದ್ದು, ಇಲ್ಲಿ ಇರುವ 100 ವರ್ಷ ವಯಸ್ಸಿನ ಕ್ಷಿತಯ್ಯ ಮಡರ್ಬೋಯಿನಾ ಹಾಗೂ 86 ವರ್ಷ ವಯಸ್ಸಿನ ಕ್ಷಿತಯ್ಯ ಕೊಮೆರಾ ಅವರಿಂದ ಮತದಾನ ಮಾಡಿಸಲು ಅಧಿಕಾರಿಗಳು 107 ಕಿಮೀ ಸಂಚರಿಸಿ ಅವರ ಮನೆಗೇ ತೆರಳಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಈ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ 40 ಶೇಕಡಾ ಅಂಗವೈಕಲ್ಯ ಹೊಂದಿದವರಿಗೆ ಮನೆಯಿಂದಲೇ ಮತದಾನ ಮಾಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!