ವೋಟರ್ ಐಡಿ ತರದ ಸಚಿವರನ್ನು ವಾಪಸ್ ಕಳಿಸಿದ ಚುನಾವಣಾ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೋಟರ್‌ ಐಡಿ ತಂದಿರದ ಕಾರಣ  ಮಾಜಿ‌ ಸಚಿವ ಆನಂದ್‌ ಅಸ್ನೋಟಿಕರ್ ಮತದಾನ ಮಾಡದೇ ವಾಪಸ್ ಆಗಿದ್ದಾರೆ.

ಕಾರವಾರದ ಸೆಂಟ್ ಮೈಕಲ್ ಶಾಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದರು. ಮತಗಟ್ಟೆ ಸಂಖ್ಯೆ ಇರುವ ಚೀಟಿ ಬಿಟ್ಟು ಇನ್ಯಾವ ದಾಖಲೆ ತಂದಿರಲಿಲ್ಲ. ಹೀಗಾಗಿ ಅವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿಲ್ಲ. ಆನಂದ್‌ ಅವರು ಮನೆಗೆ ತೆರಳಿ ಮತ್ತೆ ಕಾರ್ಡ್‌ ತರುವುದಾಗಿ ಹೇಳಿ ಹೋಗಿದ್ದಾರೆ.

ಮಾಜಿ‌ ಸಚಿವ ಆನಂದ್‌ ಅಸ್ನೋಟಿಕರ್ ಅವರು ಮತದಾನ ಮಾಡದೆ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್​ ತಂದು ವೋಟ್ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!