ಬಾಸ್ ಕಡೆಯಿಂದ ಭರ್ಜರಿ ಗಿಫ್ಟ್, ಮರ್ಸೀಡಿಸ್ ಬೆನ್ಝ್ ಪಡೆದ ಉದ್ಯೋಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಸಂಬಳ, ಹೈಕ್, ಬೋನಸ್ ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಬಾಸ್ ಮರ್ಸಿಡಿಸ್ ಬೆನ್ಝ್‌ನ್ನೇ ಗಿಫ್ಟ್ ಆಗಿ ಕೊಟ್ಟು ಬಿಟ್ರೆ?

ಇದು ಕನಸಲ್ಲ ಸ್ವಾಮಿ, ಕೇರಳದಲ್ಲಿ ಕ್ಲಿಂಟ್ ಆಂಟೋನಿ ಎಂಬ ಉದ್ಯೋಗಿ ತಮ್ಮ ಬಾಸ್‌ನಿಂದ ಕಾರ್‌ನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಕಳೆದ 11 ವರ್ಷಗಳಿಂದ ಕ್ಲಿಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಪ್ರೀತಿಯಿಂದ ಬಾಸ್ ಕಾರ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಕಾರಿನ ಬೆಲೆ ಬರೋಬ್ಬರಿ 57 ಲಕ್ಷ ರೂಪಾಯಿಗಳಾಗಿದೆ. ಕಂಪನಿ ಆರಂಭವಾದಾಗ ಮೊದಲ ಉದ್ಯೋಗಿ ಕ್ಲಿಂಟ್ ಆಗಿದ್ದರು. ಆಗಿನಿಂದ ಈಗಿನವರೆಗೂ ನಿಷ್ಠೆಯಿಂದ ಕ್ಲಿಂಟ್ ಕೆಲಸ ಮಾಡುತ್ತಿದ್ದರು. ಕಂಪನಿಯ ಯಶಸ್ಸಿಗೆ ವರ್ಷಾನುಗಟ್ಟಲೆ ದುಡಿದ ಉದ್ಯೋಗಿಗೆ ಗಿಫ್ಟ್ ನೀಡೋಕೆ ಖುಷಿಯಾಗಿದೆ ಎಂದು ಸಿಇಒ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!