Saturday, October 1, 2022

Latest Posts

ಪರಿಸರ ಜಾಗೃತಿಗಾಗಿ ಕೇರಳ- ಸಿಂಗಾಪುರಕ್ಕೆ ಉಡುಪಿಯ ಹರ್ಷೇಂದ್ರ ಸೈಕಲ್ ಯಾತ್ರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಯುವಕನೋರ್ವ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಹರ್ಷೇಂದ್ರ ಆಚಾರ್ಯ (23) ಎಂಬ ಯುವಕ ಸೈಕಲ್ ಮೂಲಕ ಕೇರಳದಿಂದ ಸಿಂಗಾಪುರಕ್ಕೆ ಸುಮಾರು 11,000 ಕಿಲೋಮೀಟರ್ ಯಾತ್ರೆ ಕೈಗೊಂಡವರು.

ಬ್ರಹ್ಮಾವರದಲ್ಲಿ ಪ್ರೌಢಶಿಕ್ಷಣ ಮತ್ತು ನಿಟ್ಟೆಯಲ್ಲಿ ಡಿಪ್ಲೊಮೋ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರು ಶಿವರಾಮ ಕಾರಂತರ (ಕೋಶಿಕಾ) ನಾಟಕ ತಂಡದ ಕಲಾವಿದನಾಗಿದ್ದಾರೆ. ಜೊತೆಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ರಜೆ ದಿನಗಳಲ್ಲಿ ಲ್ಯಾಂಬ್ರಟ್ ಸ್ಕೂಟರ್ ಮತ್ತು ಜಾವ ಬೈಕ್ ನಲ್ಲಿ ದಕ್ಷಿಣ ಕನ್ನಡದ ಚಾರಣ ಪ್ರದೇಶಗಳ ಸುತ್ತಿದ್ದಾರೆ. ಅಕ್ಟೋಬರ್ 2021ರಲ್ಲಿ 2700 ಕಿಲೋಮೀಟರ್ ಕಾಲು ನಡಿಗೆಯಲ್ಲಿ ‘ಕರ್ನಾಟಕದಿಂದ ಕಾಶ್ಮೀರಕ್ಕೆ’ ಹೋಗಿ ‘ಹುಲಿಕುಣಿತ’ ಪ್ರದರ್ಶನ. ಆಗಸ್ಟ್ 15 ರಂದು ಕೇರಳದಿಂದ ಸಿಂಗಾಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ರಾಷ್ಟ್ರಧ್ವಜ ನೀಡಿ ಶುಭ ಹಾರೈಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!