ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದಲ್ಲಿ ಹುತಾತ್ಮ CRPF ಯೋಧ ಸತೀಶ್ ಕುಮಾರ್ ಪುತ್ರಿಯ ವಿವಾಹ ಅದ್ಧೂರಿಯಾಗಿ ನಡೆದಿದೆ. ವಿಶೇಷ ಏನಂದರೆ ಈ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು CRPF ಯೋಧರೆ ನಿರ್ವಹಿಸಿದ್ದಾರೆ.
ಹರಿಯಾಣದ ಚತ್ತಾರ್ ಗ್ರಾಮದ CRPF ಯೋಧ ಸತೀಶ್ ಕುಮಾರ್ 9 ವರ್ಷಗಳ ಹಿಂದೆ, ಅಂದರೆ ಮಾರ್ಚ್ 20, 2015ರಂದು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.
ಬಡ ಕುಟುಂಬದ ಸತೀಶ್ ಕುಮಾರ್ ದಿಟ್ಟ CRPF ಜವಾನ ಎಂದೇ ಗುರುತಿಸಿಕೊಂಡಿದ್ದರು. ಉಗ್ರರ ವಿರುದ್ಧದ ಮಿಂಚಿನ ಕಾರ್ಯಾಚರಣೆ ನಡೆಸುವಲ್ಲಿ ಸತೀಶ್ ಕುಮಾರ್ ಸದಾ ಮುಂದಿದ್ದರು. ಆದರೆ ಸತೀಶ್ ಕುಮಾರ್ ನಿಧನ ಕುಟುಂಬಕ್ಕೆ ಅತೀ ದೊಡ್ಡ ಆಘಾತ ನೀಡಿತ್ತು. ಅಂದು CRPF ಜವಾ
ಸತೀಶ್ ಕುಮಾರ್ ಹುತಾತ್ಮರಾದ 9 ವರ್ಷದ ಬಳಿಕ ಪುತ್ರಿ ನಿಶಾ ಮದುವೆ ಫಿಕ್ಸ್ ಆಗಿದೆ. ಇತ್ತ CRPF ಜವಾನರು ಕಾರ್ಯಪ್ರವೃತ್ತರಾಗಿದ್ದಾರೆ. ನಿಶಾ ತಂದೆ ಸತೀಶ್ ಕುಮಾರ್ ಹುತಾತ್ಮರಾಗಿರುವ ಕಾರಣ ತಂದೆಯ ಕೊರತೆ ಕಾಡಬಾರದು ಅನ್ನೋದು CRPF ಜವಾನರ ಆಶಯವಾಗಿತ್ತು. ನಿಶಾ ಮದುವೆಗೆ ಆಗಮಿಸಿದ CRPF ಜವಾನರು ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನವನ್ನು ಮಾಡಿದ ವಿಶೇಷ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇದೇ ವೇಳೆ ಯೋಧರ ಪರ ಜೈಕಾರ ಮೊಳಗಿದೆ.
CRPF ಡಿಐಜಿ ಕೋಮಲ್ ಕುಮಾರ್ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಸತೀಶ್ ಕುಮಾರ್ ನಮ್ಮ ಜೊತೆ CRPF ತಂಡದಲ್ಲಿದ್ದರು. ಇದೀಗ ಈ ಶುಭ ಸಂದರ್ಭದಲ್ಲಿ ಸತೀಶ್ ಕುಮಾರ್ ಪುತ್ರಿಗೆ ತಂದೆಯ ಕೊರಗು ಕಾಡಬಾರದು. ಕನ್ಯಾದಾನ ಮಾಡುವಾಗ ಆಕೆ ನಗು ನಗುತ್ತಲೆ ಇರಬೇಕು. ಹೀಗಾಗಿ ನಾವು ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೇವೆ ಎಂದಿದ್ದಾರೆ.