ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್(Asia Cup 2023) ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ ಕ್ಕೆ ತನ್ನ ಮೊದಲ ಪಂದ್ಯದಲ್ಲೇ ಮುಖಭಂಗವಾಗಿದೆ.
ನೇಪಾಳ(PAK vs NEP) ವಿರುದ್ಧ ತವರಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Multan Cricket Stadium) ಮೊದಲ ಪಂದ್ಯ ಆಡುತ್ತಿದ್ದು, ಆದ್ರೆ ತವರಲ್ಲೇ ಅಭಿಮಾನಿಗಳೇ ಇಲ್ಲ.
ಈ ಪಂದ್ಯವನ್ನು ನೋಡಲು ಸ್ಟೇಡಿಯಂನಲ್ಲಿ ಬೆರಳೆಣಿಕೆಷ್ಟು ಮಂದಿ ಕಾಣಿಸಿಕೊಂಡಿದ್ದು, ಇದರಲ್ಲಿಯೂ ನೇಪಾಳ ತಂಡಕ್ಕೆ ಬೆಂಬಲ ಸೂಚಿಸುವ ಅಭಿಮಾನಿಗಳೇ ಹೆಚ್ಚಾಗಿದ್ದಾರೆ. ಪಾಕ್ನ ಈ ಸ್ಥಿತಿಯನ್ನು ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಖಾಲಿ ಖಾಲಿ ಸ್ಟೇಡಿಯಂನ ಫೋಟೊಗಳು ವೈರಲ್ ಆಗಿದ್ದು ಮೊದಲ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಾಸ್ಗೂ ಮುನ್ನ ನಡೆದ ಉದ್ಘಾಟನ ಸಮಾರಂಭದಲ್ಲಿ ಗಾಯಕರಾದ ಐಮಾ ಬೇಗ್ ಮತ್ತು ತ್ರಿಶಾಲಾ ಗುರುಂಗ್ ಖಾಲಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಬೇಕಾಯಿತು. 15 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಯಾದ ಕಾರಣ ಬಹು ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಆದರೆ ಬೆರಳಿಕೆಯಷ್ಟು ಪ್ರೇಕ್ಷಕರು ಕಾಣಿಸಿಕೊಂಡಿದ್ದು ಪಾಕ್ ಕ್ರಿಕೆಟ್ ಮಂಡಳಿಗೆ ಮುಜುಗರ ತಂದಿದೆ.