ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್ ಧೂಳೆಬ್ಬಿಸಿ ವಿಶ್ವ ಗಲ್ಲಾ ಪೆಟ್ಟಿಗೆಯಲ್ಲಿ 400 ಕೋಟಿಯನ್ನೂ ಗಳಿಸಿ ಅಬ್ಬರಿಸಿದ ಕಾಂತಾರ ಚಿತ್ರ ಓಟಿಟಿಗೆ ಲಗ್ಗೆ ಇಟ್ಟಿದೆ.
ಚಿತ್ರದಲ್ಲಿ ಕಥೆ ಹೇಗೆ ಜನರ ಮನಸ್ಸು ಮುಟ್ಟಿದೋ ಹಾಗೆಯೇ ಹಾಡುಗಳು ಕೂಡ ಬೇಗನೆ ಜನರನ್ನು ತಲುಪಿತ್ತು. ಅದರಲ್ಲೂ ‘ವರಾಹ ರೂಪಂ’ ಹಾಡು ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು.
ಆದರೆ ಕಳೆದ ಕೆಲವು ದಿನಗಳಿಂದ ವರಾಹ ರೂಪಂ ಹಾಡು ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪೋಸ್ ಮಾಡಿದ್ದ ‘ನವರಸಮ್’ ಹಾಡಿನ ಕಾಪಿ ಎಂದು ಕಾನೂನಿನ ತೊಡಕುಗಳು ಉಂಟಾಯಿತು.
ಇದೆಲ್ಲಾ ಆದರೂ ಸಿನಿಮಾದಲ್ಲಿ ಹಾಡಿನಲ್ಲಿ ಯಾವುದೇ ಬಂದಲಾವಣೆ ಆಗಿರಲಿಲ್ಲ. ಆದರೆ ಇದೀಗ ಓಟಿಟಿಗೆ ಬಂದ ಕಂಠರದಲ್ಲಿ ವರಾಹ ರೂಪಂ ಹಾಡೇ ಬದಲಾಗಿಬಿಟ್ಟಿದೆ.
ಅಮೆಜಾನ್ ಪ್ರೈಮ್ ವಿಡಿಯೊ ಓಟಿಟಿಯಲ್ಲಿ ಇಂದಿನಿಂದ ( ನವೆಂಬರ್ 24 ) ಕಾಂತಾರ ಪ್ರಸಾರವಾಗುತ್ತಿದ್ದು, ಮತ್ತೊಮ್ಮೆ ಕಾಂತಾರ ಚಿತ್ರವನ್ನು ನೋಡಲು ಮುಂದಾದ ಪ್ರೇಕ್ಷಕನಿಗೆ ಇಲ್ಲಿ ನಿರಾಸೆಯಾಗಿದೆ. ಚಿತ್ರದ ಕೊನೆಯಲ್ಲಿ ಇದ್ದ ವರಾಹ ರೂಪಂ ಹಾಡಿನ ರಾಗ ಸಂಪೂರ್ಣ ಬದಲಾಗಿ ಹೋಗಿದೆ. ಇನ್ನು ಹಾಡಿನ ಸಾಹಿತ್ಯ ಹಾಗೇ ಉಳಿದಿದ್ದು ಹಾಡಿಗೆ ಬಳಸಲಾಗಿದ್ದ ರೋಮಾಂಚನಕಾರಿ ಸಂಗೀತವನ್ನೂ ಸಹ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ಹಾಡಿನಲ್ಲಿ ಇದ್ದಷ್ಟು ಆ ಭಾವನೆ ಈ ಹಾಡಿನಲ್ಲಿ ಇಲ್ಲ ಹಾಗೂ ಹಳೆಯ ಹಾಡನ್ನು ಕೇಳಿದ್ದ ಕೇಳುಗರಿಗೆ ಈ ಹಾಡು ಕೊಂಚವೂ ಕಿಕ್ ನೀಡುವುದಿಲ್ಲ ಎನ್ನುತ್ತಾರೆ ಸಿನಿ ಪ್ರಿಯರು. .