Friday, December 9, 2022

Latest Posts

ಮುದ್ದಾದ ಮಗಳಿಗೆ ನಾಮಕರಣ ಮಾಡಿದ ರಣಬೀರ್‌-ಆಲಿಯಾ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಸ್ಟಾರ್‌ ಜೋಡಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ತಮ್ಮ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ.

ನವೆಂಬರ್ 6 ರಂದು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅಭಿಮಾನಿಗಳು ಹೆಸರಿನ ಕುರಿತು ತೀವ್ರ ಚರ್ಚೆ ನಡೆಸಿದ್ದರು.ಇದೀಗ ರಣಬೀರ್ ಹಾಗೂ ಆಲಿಯಾ ಮಗಳ ಹೆಸರು ಬಹಿರಂಗ ಪಡಿಸಲಾಗಿದೆ.

ರಾಹಾ ಪದದ ಅರ್ಥವನ್ನು ಅಲಿಯಾ ಭಟ್ ವಿವರಿಸಿದ್ದಾರೆ. ರಾಹಾ ಹಲವು ಅರ್ಥಗಳನ್ನು ಹೊಂದಿದೆ. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ. ಇನ್ನು ಸಂಸ್ಕೃತದಲ್ಲಿ ಕುಲ ಎಂದರ್ಥ. ಬಂಗಾಳಿ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದರ್ಥ, ಅರೆಬಿಕ್ ಭಾಷೆಯಲ್ಲಿ ರಾಹಾ ಎಂದರೆ ಶಾಂತಿ, ಸಂತೋಷ ಹಾಗೂ ಸ್ವಾತಂತ್ರ್ಯ ಎಂಬ ಅರ್ಥವಿದೆ.

ನಾವು ರಾಹಾಳನ್ನು ಕೈಯಲ್ಲಿ ಹಿಡಿದ ದಿನದಿಂದ ನಾವು ಸಂತೋಷ, ಶಾಂತಿ ಅನುಭವಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ಜೀವಂತವಾಗಿಸಿದ, ಸಂತೋಷವಾಗಿರಿಸಿದ ರಾಹಾಳಿಗೆ ಧನ್ಯವಾದ. ನಮ್ಮ ಜೀವನ ಈಗಷ್ಟೇ ಆರಂಭವಾದಂತಿದೆ ಎಂದು ಅಲಿಯಾ ಭಟ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!