ರಾಜ್ಯದ ಭವಿಷ್ಯ ನಿರ್ಧರಿಸೋದು ಮತದಾರನೇ, ವೋಟಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಕ್ಕೆ ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿರುವ ದಿನ ಬಂದಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.

ಇಂದು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಇಡೀ ದೇಶದ ಕಣ್ಣು ಕರ್ನಾಟಕದ ಮೇಲಿದೆ. ಮತದಾರ ತನ್ನ ಹಕ್ಕು ಚಲಾಯಿಸಿ ಸೂಕ್ತರನ್ನು ಆರಿಸುವ ಸಮಯ ಇದಾಗಿದೆ.

ಒಟ್ಟಾರೆ 224ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಸಾಕಷ್ಟು ರಾಜಕೀಯ ನಾಯಕರ ಹಣೆಬರಹ ನಿರ್ಧಾರವಾಗಲಿದೆ.

ವಿಧಾನಸಭೆ ಚುನಾವಣೆಗೆ ಸಾಕಷ್ಟು ದಿನ ಬಾಕಿ ಇರುವಂತೆ ರಾಜಕಾರಣಿಗಳು ಜನರ ಮನ ತಲುಪಲು ರೋಡ್ ಶೋ, ಸಮಾವೇಶ, ಸೆಲೆಬ್ರಿಟಿಗಳ ಜತೆ ಮನೆ ಮನೆ ಭೇಟಿ ನೀಡಿದ್ದಾರೆ. ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸುವ ದಿನ ಇದಾಗಿದೆ.

ಮತದಾನಕ್ಕೆ ನಿನ್ನೆಯೇ ಸಕಲ ತಯಾರಿ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಇವಿಎಂ, ವಿವಿ ಪ್ಯಾಟ್ ಹಾಗೂ ಮತದಾನಕ್ಕೆ ಬೇಕಿರುವ ಇತರೆ ವಸ್ತುಗಳನ್ನು ಚುನಾವಣಾ ಸಿಬ್ಬಂದಿಗಳು ತಯಾರಿಟ್ಟಿದ್ದಾರೆ. ನಿನ್ನೆಯೇ ತಮ್ಮ ಮತಗಟ್ಟೆಗಳಿಗೆ ತೆರಳಿ ತಯಾರಿ ನಡೆಸಿದ್ದಾರೆ.

ಇಂದು 2,615ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಒಟ್ಟಾರೆ 5 ಕೋಟಿ 31 ಲಕ್ಷದ 54 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾನಕ್ಕೆಂದೇ ಸರ್ಕಾರ ರಜೆ ಘೋಷಿಸಿದ್ದು, ಎಲ್ಲರೂ ತಪ್ಪದೇ ಮತದಾನ ಮಾಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!