ರೈಲಿನಿಂದ ಬಿದ್ದ ಮಗು ರಕ್ಷಿಸಲು ಮುಂದಾದ ತಂದೆ, ಅಪ್ಪ ಮಗಳು ಇಬ್ಬರೂ ಉಳಿಯಲಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಲಿಸುತ್ತಿರುವ ರೈಲಿನಿಂದ ಬಿದ್ದು ಹೋದ ಮಗುವನ್ನು ರಕ್ಷಿಸಲು ತಂದೆಯೂ ರೈಲಿನಿಂದ ಹಾರಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.

ವಾರಣಾಸಿಯ ಮಿರ್ಜಾಮುರಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ಹೆಚ್ಚು ಜನ ಇದ್ದರು. ಹಾಗಾಗಿ ರೈಲಿನ ಬಾಗಿಲ ಬಳಿ ಹೀರಾ ರೈನ್, ಪತ್ನಿ ಝರೀನಾ, ಮೂರು ವರ್ಷದ ಮಗು ಹಾಗೂ ಸೋದರ ಮಾವ ಫಿರೋಜ್ ಕುಳಿತಿದ್ದರು.

ಮೂರು ವರ್ಷದ ಮಗು ರೈಲಿನಿಂದ ಬಿದ್ದಿದ್ದು, ತಕ್ಷಣವೇ ತಂದೆ ಹೀರಾ ರೈನ್ ರೈಲಿನಿಂದ ಹಾರಿದ್ದಾರೆ. ಪತ್ನಿ ಝರೀನಾ ರೈಲಿನ ಚೈನ್ ಎಳೆದು ನಿಲ್ಲಿಸಿದ್ದಾರೆ. ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಹೀರಾ ರೈನ್ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ತಕ್ಷಣವೇ ಪೊಲೀಸರು ಧಾವಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!