ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ ಶ್ಯಾಮ್ ಬೆನಗಲ್ ಅವರ ‘ಮಂಥನ್’ ಚಲನಚಿತ್ರ ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.
‘ಮಂಥನ್’ 1976 ರಲ್ಲಿ ಅಮುಲ್ ನ 5 ಲಕ್ಷ ಹೈನುಗಾರಿಕೆ ರೈತರು ನಿರ್ಮಿಸಿದ ಪ್ರಶಸ್ತಿ ವಿಜೇತ ಚಲನಚಿತ್ರ ಇದಾಗಿದೆ.
ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ “ಎಮೋಷನ್ ಇನ್ ಕಲರ್: ಎ ಕೆಲಿಡೋಸ್ಕೋಪ್ ಆಫ್ ಇಂಡಿಯನ್ ಸಿನಿಮಾ” ದ ಭಾಗವಾಗಿ ಮಾರ್ಚ್ 10, 2025 ರಂದು ಭಾರತದ 12 ಐಕಾನಿಕ್ ಚಲನಚಿತ್ರಗಳ ಕ್ಯುರೇಟೆಡ್ ಆಯ್ಕೆಯ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಅಮುಲ್ ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF)ಪ್ರಕಟಣೆಯಲ್ಲಿ ತಿಳಿಸಿದೆ.