ಚೆಸ್ ವಿಶ್ವಕಪ್​ನ ಫೈನಲ್ ನಾಳೆ ನಿರ್ಣಾಯಕ: ಎಲ್ಲದಕ್ಕೂ ನಾನು ಸಿದ್ಧ ಎಂದ ಪ್ರಜ್ಞಾನಂದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೆಸ್ ವಿಶ್ವಕಪ್​ನ ಫೈನಲ್ ಪಂದ್ಯದ ಮೊದಲೆರಡು ಗೇಮ್​ ನಲ್ಲಿ ಆರ್​. ಪ್ರಜ್ಞಾನಂದ (R Praggnanandhaa) ಮತ್ತು ಮ್ಯಾಗ್ನಸ್ ಕಾರ್ಲ್‌ಸೆನ್ ಡ್ರಾನಲ್ಲಿ ಅಂತ್ಯಗೊಳಿಸಿದ್ದಾರೆ. ಇದರೊಂದಿಗೆ ಕ್ಲಾಸಿಕ್ ಗೇಮ್​ 1-1 ಅಂತರದಿಂದ ಸಮಬಲವಾಗಿದ್ದು, ಹೀಗಾಗಿ ಗುರುವಾರ ಟೈಬ್ರೇಕರ್​ ಪಂದ್ಯದ ಮೂಲಕ ಚಾಂಪಿಯನ್ ಯಾರೆಂಬುದನ್ನು ನಿರ್ಧರಿಸಲಾಗುತ್ತದೆ.

ಪಂದ್ಯದ ಬಳಿಕ ಮಾತನಾಡಿದ ಪ್ರಜ್ಞಾನಂದ, ಕಾರ್ಲ್​ಸೆನ್ ಇಂದು ಬೇಗನೆ ಡ್ರಾ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ. ಆದರೆ ಕೆಲ ನಡೆಗಳ ಬಳಿಕ ಅವರು ಡ್ರಾ ಮಾಡಿಕೊಳ್ಳುತ್ತಾರೆಂಬುದು ನಾನು ಅರಿತುಕೊಂಡೆ. ನಾನು ಕೂಡ ಡ್ರಾ ಆಗಬೇಕೆಂದು ಬಯಸಿದ್ದೆ. ಏಕೆಂದರೆ ನಾನು ಸಹ ಆಯಾಸಗೊಂಡಿದ್ದೆ ಎಂದು ತಿಳಿಸಿದರು.

ನಾಳೆ (ಬುಧವಾರ) ನಾನು ಫ್ರೆಶ್ ಮೈಂಡ್​ನೊಂದಿಗೆ ಬರಲು ಬಯಸುತ್ತೇನೆ. ಇದಕ್ಕಾಗಿ ಇಂದು ಉತ್ತಮ ವಿಶ್ರಾಂತಿ ಪಡೆಯಬೇಕಿದೆ. ಏಕೆಂದರೆ ನಾಳೆ ಸಾಕಷ್ಟು ಟೈಬ್ರೇಕ್‌ಗಳನ್ನು ಆಡಲಿದ್ದೇನೆ. ಇಲ್ಲಿ ಹಲವು ಸುತ್ತುಗಳ ಪಂದ್ಯ ನಡೆಯಬಹುದು ಅಥವಾ ಕಡಿಮೆ ಆಟಗಳನ್ನು ಆಡಬಹುದು. ಹೀಗಾಗಿ ಎಲ್ಲದಕ್ಕೂ ನಾನು ಸಿದ್ಧನಾಗಿರಬೇಕೆಂದು ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!