ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಮೊದಲ ಪ್ರಕರಣ ಬೀದಿ ವ್ಯಾಪಾರಿ ವಿರುದ್ಧ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಕ್ಷನ್ ಭಾರತೀಯ ನ್ಯಾಯ ಸಂಹಿತಾ, 2023 ರ ಅಡಿಯಲ್ಲಿ ಮೊದಲ ಎಫ್‌ಐಆರ್ ಅನ್ನು ರಾಷ್ಟ್ರ ರಾಜಧಾನಿ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಹೊಸದಿಲ್ಲಿ ರೈಲು ನಿಲ್ದಾಣದ ಫುಟ್‌ ಓವರ್‌ ಬ್ರಿಡ್ಜ್‌ ಅಡಿ ಅಡ್ಡಿಪಡಿಸಿ ಮಾರಾಟ ಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 285ರ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ ಆರೋಪಿಯನ್ನು ಬಿಹಾರದ ಬರ್ಹ್ ನಿವಾಸಿ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಯು ಮುಖ್ಯರಸ್ತೆಯ ಬಳಿ ಎತ್ತಿನಗಾಡಿಯಲ್ಲಿ ತಂಬಾಕು ಮತ್ತು ನೀರನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಯನ್ನು ತನ್ನ ಗಾಡಿ ತೆಗೆಯುವಂತೆ ಹೇಳಿದಾಗ ಆತ ಅಧಿಕಾರಿಗಳನ್ನು ಕಡೆಗಣಿಸಿದ್ದಾನೆ.

ಭಾರತೀಯ ದಂಡ ಸಂಹಿತೆ (IPC) ಅನ್ನು ಭಾರತೀಯ ನ್ಯಾಯ ಸಂಹಿತಾ, CrPC ಅನ್ನು ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷಿ ಅಧಿನಿಯಮ್‌ನೊಂದಿಗೆ ಬದಲಾಯಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತಾವು 358 ವಿಭಾಗಗಳನ್ನು ಹೊಂದಿದೆ. ಸಂಹಿತೆಯಲ್ಲಿ ಒಟ್ಟು 20 ಹೊಸ ಅಪರಾಧಗಳು ಸೇರ್ಪಡೆಯಾಗಿದ್ದು, 33 ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ. 83 ಅಪರಾಧಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ ಮತ್ತು 23 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. ಆರು ಅಪರಾಧಗಳಲ್ಲಿ ಸಮುದಾಯ ಸೇವೆಯ ದಂಡವನ್ನು ಪರಿಚಯಿಸಲಾಗಿದೆ ಮತ್ತು ಕಾಯಿದೆಯಲ್ಲಿ 19 ವಿಭಾಗಗಳನ್ನು ರದ್ದುಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!