ಮೊದಲ ಮಳೆಗೆ ಸೃಷ್ಟಿಯಾಯ್ತು ಅವಾಂತರ, ಕಾಲೇಜ್‌ ಬಸ್‌ ಮೇಲೆ ಬಿದ್ದ ವಿದ್ಯುತ್‌ ಕಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಮಳೆಗಾಗಿ ಹಪಹಪಿಸುತ್ತಿದ್ದ ಜನರಿಗೆ ಇದೀಗ ವರುಣ ಕೃಪೆ ತೋರಿಸಿದ್ದಾನೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ ಅಬ್ಬರದ ಮಳೆಯಾಗಿದ್ದು, ಗಂಟೆಗೂ ಹೆಚ್ಚುಕಾಲ ಸುರಿದ ವರ್ಷಧಾರೆ ಇಳೆಗೆ ಹೊಸ ಕಳೆ ನೀಡಿತ್ತು.

ಈ ಜೋರು ಮಳೆಗೆ ನರಸೀಪುರದಲ್ಲಿ ಭಾರೀಮರಗಳು ಧರೆಗುರುಳಿದ್ವು, ವಾಹನಗಳ ಮೇಲೆಯೇ ಮರವೊಂದು ಉರುಳಿಬಿದ್ದ ಜನರನ್ನ ಆತಂಕಕ್ಕೆ ತಳ್ಳಿತ್ತು. ಇನ್ನು ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಕಾಲೇಜು ಬಸ್​ವೊಂದು ರಸ್ತೆಯಲ್ಲಿ ಬರುವಾಗಲೇ ವಿದ್ಯುತ್ ಕಂಬ ಬಸ್​ನ ಮೇಲೆ ಬಿದ್ದಿದೆ. ಬಸ್‌ನಲ್ಲಿ ವಿದ್ಯಾರ್ಥಿಗಳು ಕುಳಿತಿದ್ದರು.

ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!