ಗ್ರ್ಯಾಂಡ್ ಸ್ವಿಸ್ ಪ್ರಶಸ್ತಿ’ಗೆ ಮುತ್ತಿಕ್ಕಿದ ದೇಶದ ಮೊದಲ ಮಹಿಳೆ ಆರ್. ವೈಶಾಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಕೆಯಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಚೆಸ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ.

ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ಯಾನಂದ ಅವರ ಸಹೋದರಿ ಆರ್. ವೈಶಾಲಿ ಮಹಿಳಾ ಗ್ರ್ಯಾಂಡ್ ಸ್ವಿಸ್ ಚೆಸ್ ಪಂದ್ಯಾಟದಲ್ಲಿ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ.

ಮೊದಲ ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ವೈಶಾಲಿ ಪಾತ್ರರಾಗಿದ್ದಾರೆ. ಮಂಗೋಲಿಯಾದ ಬತ್ಖುಯಾಗ್ ಮುಂಗುಟಲ್ ಅವರ ವಿರುದ್ಧದ ಅಂತಿಮ ಸುತ್ತಿನಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ ವೈಶಾಲಿ ಗೆಲುವು ಸಾಧಿಸಿದ್ದಾರೆ.

ಇದರೊಂದಿಗೆ ಮುಂದಿನ ವರ್ಷ ಕೆನಡಾದಲ್ಲಿ ನಡೆಯುವ ವುಮೆನ್ಸ್ ಕ್ಯಾಂಡಿಡೇಟ್ ಇವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಚಿನ್ನದ ಪದಕ ಹಾಗೂ 25000 ಯುಎಸ್ ಡಾಲರ್ ಬಹುಮಾನವನ್ನು ವೈಶಾಲಿ ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!