ದಿನೇದಿನೇ ಹೆಚ್ಚುತ್ತಿದೆ ಸೇಡಿನ ಜ್ವಾಲಾಗ್ನಿ: ಅಟ್ಟಾರಿ ಗಡಿ ಬಂದ್.. ಪಾಕ್ ವ್ಯಾಪಾರ ಲೆಕ್ಕಾಚಾರ ಉಲ್ಟಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ಜೊತೆಗೆ ಹಲವಾರು ರಾಜತಾಂತ್ರಿಕ ಒಪ್ಪಂದಗಳನ್ನು ಕೊನೆಗೊಳಿಸಿದ್ದು, ಪ್ರಮುಖವಾಗಿ ಅಟ್ಟಾರಿ ಗಡಿಯನ್ನು ತಕ್ಷಣವೇ ಮುಚ್ಚಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಪಾಕ್ ಗೆ ಪೆಟ್ಟು:
ಅಟ್ಟಾರಿ ಗಡಿ ಮುಚ್ಚುವಿಕೆಯಿಂದ ಭಾರತ-ಪಾಕಿಸ್ತಾನದ ನಡುವಿನ ಅಧಿಕೃತ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ, ಪಾಕಿಸ್ತಾನದಲ್ಲಿ ಭಾರತೀಯ ಉತ್ಪನ್ನಗಳ ಬೇಡಿಕೆಯು ಮೂರನೇ ದೇಶಗಳ ಮೂಲಕ ಪರೋಕ್ಷವಾಗಿ ಮುಂದುವರಿಯುವ ಸಾಧ್ಯತೆಯಿದೆ.

ಪಾಕಿಸ್ತಾನವು ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಾಪುರದಂತಹ ಮೂರನೇ ದೇಶಗಳ ಮೂಲಕ ಭಾರತೀಯ ಸರಕುಗಳಾದ ಔಷಧಿಗಳು, ರಾಸಾಯನಿಕಗಳು, ಹತ್ತಿ, ಚಹಾ, ಕಾಫಿ, ಈರುಳ್ಳಿ, ಟೊಮೆಟೊ, ಕಬ್ಬಿಣ, ಉಕ್ಕು, ಸಕ್ಕರೆ, ಉಪ್ಪು, ಮತ್ತು ಆಟೋಮೊಬೈಲ್ ಭಾಗಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಬಹುದು.

ಆದರೆ, ಈ ಮೂರನೇ ದೇಶಗಳ ಆಮದು ದುಬಾರಿಯಾಗಲಿದ್ದು, ಪಾಕಿಸ್ತಾನದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಬಹುದು ಎನ್ನಲಾಗಿದೆ.

ಪಾಕಿಸ್ತಾನದ ರೂಪಾಯಿಯ ಮೌಲ್ಯವು ಡಾಲರ್ ಎದುರು ತೀವ್ರವಾಗಿ ಕುಸಿಯುತ್ತಿದ್ದು, ವಿನಿಮಯ ದರ 300ರ ಸಮೀಪಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ, ಮೂರನೇ ದೇಶಗಳ ಮೂಲಕ ಭಾರತೀಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಭಾರೀ ವೆಚ್ಚ ತಗಲಲಿದೆ. ವಿಶೇಷವಾಗಿ ಔಷಧಿಗಳಂತಹ ಅಗತ್ಯ ವಸ್ತುಗಳ ಆಮದು ದೇಶಕ್ಕೆ ದೊಡ್ಡ ಆರ್ಥಿಕ ಸವಾಲನ್ನು ಒಡ್ಡಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!