ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಕರಿ, ಕೂರ್ಮ ಮಾಡುವಾಗಲು ಬಟಾಣಿ ಬಳಸುತ್ತಾರೆ. ಎಲ್ಲರ ಫೆವರೇಟ್ ಈ ಬಟಾಣಿಗೆ ಇದೀಗ ಬ್ಯಾನ್ ಬಿಸಿ ತಟ್ಟುತ್ತಾ ಅನ್ನೋ ಪ್ರಶ್ನೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ .
ಹೌದು! ಕರಿದ ಬಟಾಣಿಯಲ್ಲಿ ಕೃತಕ ಬಣ್ಣ ಬಳಸುವುದರಿಂದ ಆಹಾರ ಇಲಾಖೆ ಬಟಾಣಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಪರೀಕ್ಷೆಯಲ್ಲಿ ಟೆಟಾರ್ಜಿನ್ ಅಂಶ ಪತ್ತೆಯಾಗಿದ್ದು, ಇದರಿಂದ ಜನರು ನಿಧಾನವಾಗಿ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಿರುವ ಆಹಾರ ಇಲಾಖೆ, ಬಣ್ಣ ಬಳಕೆಯನ್ನು ನಿಷೇಧಿಸಲು ಯೋಜಿಸಿದೆ.
ರಾಜ್ಯದಲ್ಲಿ 30 ಜಿಲ್ಲೆಗಳಲ್ಲಿ ಕರಿದ ಬಟಾಣಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 26 ಜಿಲ್ಲೆಯಲ್ಲಿನ ಸ್ಯಾಂಪಲ್‌ಗಳು ಕರಿದ ಬಟಾಣಿ ಸುರಕ್ಷಿತ ಅಲ್ಲಎಂದು ವರದಿ ಬಂದಿರುವುದಾಗಿ ಪ್ರಾಧಿಕಾರ ಹೇಳಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಕರಿದ ಬಟಾಣಿ ತಿನ್ನಲು ಸುರಕ್ಷಿತವಲ್ಲ, ಹಾಗಾಗಿ ನಿಷೇಧ ಹೇರಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.