ನಾಲ್ಕನೇ ಗ್ಯಾರೆಂಟಿ ಬೋಗಸ್: ಸುಳ್ಳು ಭರವಸೆ ಕಾಂಗ್ರೆಸ್ ಗುಣಧರ್ಮ ಎಂದ ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕಾಂಗ್ರೆಸ್‌ನವರು ಈಗಾಗಲೇ ಮೂರು ಭರವಸೆ ಈಡೇರಿಸುವುದಾಗಿ ತಿಳಿಸಿದ್ದು, ಈಗ ನಾಲ್ಕನೇ ಬೋಗಸ್ ಗ್ಯಾರೆಂಟಿ ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳಗಾವಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಯುವ ನಿ ಎಂಬ ಕಾಂಗ್ರೆಸ್ ನಾಲ್ಕನೇ ಗ್ಯಾರೆಂಟಿ ಘೋಷಿಸಿದಕ್ಕೆ ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಸಿದ ಅವರು, ಈ ಹಿಂದೆ ನಡೆದ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಮುಂಚೆ ಇದೆ ರೀತಿ ಭರವಸೆ ನೀಡಿದ್ದರು. ಆದರೆ ಇಲ್ಲಿಯ ವರೆಗೂ ಒಂದು ಭರವಸೆ ಈಡೇರಿಸಲು ಅವರಿಂದ ಆಗಿಲ್ಲ ಎಂದರು.

ಕಾಂಗ್ರೆಸ್ ಬಹಳ ಹತಾಶರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿ ಆಗಲಾರದ ಪ್ರಮಾಣ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಇವರನ್ನು ನಂಬುವುದಿಲ್ಲ ಎಂದು ಹೇಳಿದರು.

೨೦೧೩ ರಲ್ಲಿ ರಾಜ್ಯದಲ್ಲಿ ೧೦ ಕೆ.ಜೆ. ಅಕ್ಕಿ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ೫ ಕೆ.ಜೆ. ಗೆ ಇಳಿಸಿದರು. ನಂತರ ಚುನಾವಣೆ ಬಂದಾಗ ೭ ಕೆ.ಜೆ. ಮಾಡಿದರು. ಚುನಾವಣೆಗಾಗಿ ಹೊಸ ನಿಯಮ ಹಾಗೂ ಬೋಗಸ್ ಗ್ಯಾರೆಂಟಿ, ಸುಳ್ಳು ಭರವಸೆ ನೀಡುವುದು ಕಾಂಗ್ರೆಸ್‌ನ ಗುಣ ಧರ್ಮವಾಗಿದೆ ಎಂದು ತಿಳಿಸಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂ ಮಹಾನ ನಾಯಕರು, ದೇಶದ ಬಗ್ಗೆ ಬಹಳ ಅಭಿಮಾನ ವಿದ್ದವರು ವಿದೇಶಕ್ಕೆ ಹೋದಾದ ದೇಶದ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇವರಿಗೆ ದೇಶ ಹಾಗೂ ಕರ್ನಾಟಕ ಬಗ್ಗೆ ಪ್ರೀತಿ, ವಿಶ್ವಾಸ ಹಾಗೂ ಬದ್ಧತೆ ಇರುತ್ತದೆ. ಹೀಗಾಗಿ ಜನರ ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇದಕ್ಕೆ ಮರಳಾಗುವುದಿಲ್ಲ ಎಂದರು.
ಇನ್ನೂ ಉರಿಗೌಡ ಹಾಗೂ ನಂಜೇಗೌಡ ಕುರಿತು ಪ್ರತಿಕ್ರಿಸಿದ ಅವರು, ಈ ಕುರಿತು ಸಂಶೋಧನೆಯಾಗಲಿ ಅವಾಗ ಸತ್ಯ ಹೊರಬರಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!