ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸಲ್ಮಾನ್ ಖಾನ್‌ಗೆ ಇದೀಗ ಮತ್ತೆ ಬಂಧನದ ಭೀತಿ ಎದುರಾಗಿದೆ. ಕೃಷ್ಣಮೃಗ ಬೇಟೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ನೋಯಿ ಸಲ್ಮಾನ್ ಖಾನ್ ಕೊಂದೇ ತೀರುವುದಾಗಿ ಹೇಳಿದ್ದಾರೆ. ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು. ಬಿಷ್ಣೋಯಿಗಳಿಗೆ ಕೃಷ್ಣಮೃಗ ದೇವರ ಸಮಾನ ಅಲ್ಲದೆ ಬಿಷ್ಣೋಯಿಗಳು ಪರಿಸರ ಪ್ರೇಮಿಗಳು, ಪರಿಸರಕ್ಕಾಗಿ ಪ್ರಾಣತ್ಯಾಗಕ್ಕೂ ತಯಾರಾಗಿರುವವರು. ಈ ಹಿಂದೆ ಒಮ್ಮೆ ಸಲ್ಮಾನ್ ಕೊಲ್ಲಲು ಲಾರೆನ್ಸ್ ಯತ್ನಿಸಿದ್ದ, ಆ ಪ್ರಯತ್ನ ವಿಫಲವಾಗಿದ್ದು, ಇದೀಗ ಒಂದು ಬಾರಿ ಸೆಕ್ಯುರಿಟಿ ತೆಗೆದು ನೋಡಿ ನಾನು ಅವರನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ.
ಸಲ್ಮಾನ್ ಕ್ಷಮೆ ಕೇಳಬೇಕು, ದೇವರ ಮುಂದೆ ತಪ್ಪಾಯ್ತು ಎಂದು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಅವರನ್ನು ಕೊಲ್ಲುವುದು ಖಚಿತ ಎಂದಿದ್ದಾರೆ. ಸಲ್ಮಾನ್ ಖಾನ್ ಕ್ಷಮೆ ಕೇಳಿಬಿಟ್ಟಿದ್ದರೆ ಇಷ್ಟು ದೊಡ್ಡ ವಿಷಯ ಆಗುತ್ತಿರಲಿಲ್ಲ, ಸಿಧು ಮೂಸೆ ವಾಲಾ ಕೂಡ ಇದೇ ರೀತಿ ಮಾಡಿದ್ದರು. ರಾವಣನಿಗಿಂತ ಹೆಚ್ಚು ಅಹಂಕಾರ ಸಲ್ಮಾನ್‌ಗಿದೆ ಎಂದಿದ್ದಾರೆ.