ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮುಖ್ಯವಾಗಿ ಒಡಿಶಾ ರಾಜ್ಯದಲ್ಲಿ ಸಿಕ್ಕಾಪಟ್ಟೆ ಬಿಸಿಲು ಇರೋದ್ರಿಂದ ಜನ ಹಗಲು ಹೊತ್ತಲ್ಲಿ ಹೊರಗಡೆ ಹೋಗೋದನ್ನ ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ.
ಶಾಲೆ, ಕಾಲೇಜಿಗೆ ಹೋಗೋ ವಿದ್ಯಾರ್ಥಿಗಳು ಸಿಕ್ಕಾಪಟ್ಟೆ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಬಿಸಿಲಿನಿಂದ ಮಕ್ಕಳನ್ನ ಕಾಪಾಡೋಕೆ ಒಡಿಶಾ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಶಾಲಾ ಸಮಯವನ್ನ ಬದಲಾಯಿಸಿದೆ.
1 ರಿಂದ 12ನೇ ತರಗತಿವರೆಗೆ ಬೆಳಗ್ಗೆ 6.30 ರಿಂದ ಬೆಳಗ್ಗೆ 10.30ರವರೆಗೆ ಮಾತ್ರ ಶಾಲೆಗಳು ಇರುತ್ತದೆ.ಅದೇ ರೀತಿ ಎಲ್ಲಾ ಅಂಗನವಾಡಿ ಸೆಂಟರ್‌ಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಇರುವ ಬದಲು ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ನಿಯಮಗಳು ಇವತ್ತಿಂದಲೇ ಜಾರಿಗೆ ಬರಲಿವೆ.