ಹೊಸದಿಗಂತ ವರದಿ, ತುಮಕೂರು:
ಲೋಕಾರ್ಪಣೆಗೊಳ್ಳಲುಸಜ್ಜುಗೊಂಡಿದ್ದ ಕೇಂದ್ರ ಸಚಿವ ಸೋಮಣ್ಣ ಅವರ ಕಚೇರಿಯನ್ನು ರದ್ದು ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಬಿಜೆಪಿ ,ಜೆಡಿಎಸ್ ಶಾಸಕರು ಖಂಡಿಸಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಪರಿವೀಕ್ಷಣಾ ಮಂದಿರದ ಕಟ್ಟಡದಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ಸೋಮಣ್ಣಗೆ ಕಚೇರಿ ನೀಡಲು ಅನುಮತಿಸಲಾಗಿತ್ತು. ಅದರಂತೆ ಆ.18 ರಂದು ಭಾನುವಾರ ನೂತನ ಕಚೇರಿ ಲೋಕಾರ್ಪಣೆ ಗೊಳ್ಳಲು ಸಜ್ಜಾಗಿ ನಿಂತಿತ್ತು. ಆದರೆ ಸರ್ಕಾರ ಕಚೇರಿಗೆ ನೀಡಲಾಗಿದ್ದ ಅನುಮತಿಯನ್ನು ಆ. 16ರಂದು ಶುಕ್ರವಾರ ಮಹಾಲಕ್ಷ್ಮಿ ಹಬ್ಬದ ದಿನದಂದೇ ರದ್ದು ಮಾಡಿದೆ.
ಇದನ್ನು ಖಂಡಿಸಿ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಬಾಬು ಹಾಗೂ ಬಿಜೆಪಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ರಾಜ್ಯ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಸೋಮಣ್ಣ ಹಿರಿಯ ರಾಜಕಾರಣಿ ಅವರಿಗೆ ನೀಡಿದ್ದ ಕಚೇರಿಯ ಅನುಮತಿಯನ್ನು ದಿಢೀರನೆ ರದ್ದು ಮಾಡಿರುವುದು ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಕಚೇರಿಗೆ ಅನುಮತಿ ನೀಡುವವರೆಗೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕಚೇರಿ ಮುಂದೆಯೇ ಮಲಗಿ ಪ್ರತಿಭಟನೆ ಮಾಡುತ್ತೇವೆ ಎಂದು ಜಂಟಿಯಾಗಿ ಸರಕಾರದ ಕ್ರಮವನ್ನು ಖಂಡಿಸಿದರು.