ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆ ಮಾಡುತ್ತೇವೆ ಅಂತ ಮುಂಚೆ ಏನಾದ್ರು ಜನರಿಗೆ ಹೇಳಿದ್ದರೆ ಕಾಂಗ್ರೆಸ್ 50 ಸೀಟ್ ಕೂಡ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಸರ್ಕಾರ ಆಳ್ವಿಕೆ ಮಾಡಿದ್ದು 22 ತಿಂಗಳು, ಅದರಲ್ಲಿ 18 ತಿಂಗಳು ಬೆಲೆ ಏರಿಕೆ ಸುದ್ದಿ. ಹಾಲಿನ ಬೆಲೆ, ಆಲ್ಕೋಹಾಲ್‌ನಿಂದ ಹಿಡಿದು ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ. ಇದನ್ನು ಮುಂಚೆ ಹೇಳಿದ್ದರೆ 50 ಸೀಟು ಗೆಲ್ಲುತ್ತಿರಲಿಲ್ಲ, ಕಸ ಸಂಗ್ರಹಣೆಗೂ ಸೆಸ್ ವಿಧಿಸಲಾಗುತ್ತಿದೆ. ಬ್ರ‍್ಯಾಂಡ್ ಬೆಂಗಳೂರು ಅಂತಾರೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.