ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಗುರುವಾರ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಅವರ ಕುಟುಂಬ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಅವರು ಜಾರ್ಖಂಡ್ ರಾಜ್ಯಪಾಲೆಯಾದ ಪತ್ನಿ ಸುಮತಿ ಹಾಗೂ ಕುಟುಂಬ ಸಮೇತರಾಗಿ ಕಳಸದ ಕಳಸೇಶ್ವರ, ಹೊರನಾಡಿನ ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ದರುಶನ ಪಡೆದಿದ್ದಾರೆ. ರಾಜ್ಯಪಾಲರ ಒಟ್ಟು 14 ಜನ ಕುಟುಂಬ ಸದಸ್ಯರು ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದಾರೆ.