ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಗ್ರೇಟ್ ಡಿಕೆ ಶಿವಕುಮಾರ್ ಈಗ ಗ್ರೇಟರ್ ಬೆಂಗಳೂರು ತರ್ತಿದ್ದಾರೆ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಕೆಆರ್ ನಗರ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.
ಗ್ರೇಟರ್ ಬೆಂಗಳೂರು ಬಿಲ್ ತಂದಿರೋ ಬೆಂಗಳೂರು ಉಸ್ತುವಾರಿ ಸಚಿವರೇ ಗ್ರೇಟ್. ನಾವು ಗ್ರೇಟ್ ಅಲೆಕ್ಸಾಂಡರ್, ಗ್ರೇಟ್ ಬ್ರಿಟನ್ ಹೆಸರು ಕೇಳಿದ್ದೀವಿ. ಈಗ ಅಂಥದ್ದೇ ಗ್ರೇಟ್ ಹೆಸರು ಕೇಳ್ತಿದ್ದೀವಿ. ದಿ ಗ್ರೇಟ್ ಡಿಕೆ ಶಿವಕುಮಾರ್ ಈಗ ಗ್ರೇಟರ್ ಬೆಂಗಳೂರು ತರ್ತಿದ್ದಾರೆ ಎಂದರು.
ಹನುಮಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್‌ಎಂ ಕೃಷ್ಣಾ ವಿಕಾಸ ಸೌಧ ಕಟ್ಟಿದ್ರು. ಇವರಿಬ್ಬರ ಹೆಸರು ಈಗಲೂ ಕೊಂಡಾಡ್ತಾರೆ. ನೀವೂ ಕೂಡಾ ಗ್ರೇಟರ್ ಬೆಂಗಳೂರು ಭವನ ಕಟ್ಟಿ, ನಿಮಗೆ ಒಳ್ಳೇ ಹೆಸರು ಬರುತ್ತೆ. ಗ್ರೇಟರ್ ಬೆಂಗಳೂರು ಮಾಡಿ ಬೆಂಗಳೂರು ವಿಭಜಿಸುವ ಕೆಲಸ ಬೇಡ ಎಂದು ಸಲಹೆ ನೀಡಿದರು.