ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರ ತಲೆತುಂಬ ಹೇನು ಕಾಣಿಸಿದ್ದರಿಂದ ಅಮೆರಿಕದ ವಿಮಾನವೊಂದು ತುರ್ತು ಭೂ ಸ್ಪರ್ಶ ಮಾಡಿರುವಂಥ ವಿಚಿತ್ರ ಘಟನೆ ನಡೆದಿದೆ.
ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಮಹಿಳೆಯ ತಲೆ ತುಂಬಾ ಹರಿದಾಡುತ್ತಿರುವ ಹೇನು ಕಂಡು ಶಾಕ್ಗೆ ಒಳಗಾಗಿದ್ದಾರೆ. ಬಳಿಕ ಆಕೆಯ ಪಕ್ಕದಲ್ಲಿ ಕೂರಲಾಗದೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸುವಂತೆ ಹೇಳಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಸ್ಥಿತಿಯೂ ಹಾಗೆಯೇ ಆಗಿದ್ದು, ಆತ ಕೂರಲಾಗದೇ ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಿಸಿದ್ದಾನೆ. ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ.