Saturday, October 1, 2022

Latest Posts

ಸ್ವಾತಂತ್ರ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯದ ವೀರತನ ಮರೆಯುವಂತಿಲ್ಲ: ಶಾಂತಾರಾಮ ಸಿದ್ಧಿ

ಹೊಸದಿಗಂತ ವರದಿ ಕಲಬುರಗಿ:

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಅವರ ಅಹಿಂಸೆಯ ಹೋರಾಟದ ಜೊತೆಗೆ ಬುಡಕಟ್ಟು ಸಮುದಾಯ ವೀರತನ, ಶೂರತನವೂ ಇದೆ. ಆದರೆ ಅದು ಇತಿಹಾಸದಲ್ಲಿ ಮರೆಯಾಗಿದ್ದು ದುರ್ದೈವ ಎಂದು ವಿಧಾನ ಪರಿಷತ್ ಶಾಸಕ ಹಾಗೂ ವನವಾಸಿ ಕಲ್ಯಾಣ, ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶಾಂತಾರಾಮ್ ಸಿದ್ಧಿ ಹೇಳಿದರು.

ನವದೆಹಲಿಯ ಪರಿಶಿಷ್ಠ ಪಂಗಡಗಳ ರಾಷ್ಟ್ರೀಯ ಆಯೋಗದ ಆಶ್ರಯದಡಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸಹಯೋಗದೊಂದಿಗೆ ಶುಕ್ರವಾರ ವಿ.ವಿ.ಯ ಮಹಾತ್ಮ‌ಗಾಂಧಿ ಸಭಾಂಗಣದಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ವೀರರು” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಬ್ರಿಟೀಷರ ವಿರುದ್ಧದ ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಕೊಡುಗೆ,‌ ಪರಿಶ್ರಮ ಬಹಳಷ್ಟಿದೆ. ಸ್ವಾತಂತ್ರದ ಸಂಗ್ರಾಮದಲ್ಲಿ ಕರ್ನಾಟಕದ ಹಲಗಲಿ ಬೇಡರ ಪಾತ್ರವೂ ಹಿರಿದಾಗಿದೆ. ಹೋರಾಟದ ಇತಿಹಾಸದಲ್ಲಿ ಇದು ದಾಖಲಾಗದಿರುವುದು‌ ವಿಷಾದದ ಸಂಗತಿ ಎಂದ ಅವರು ಇತಿಹಾಸದ ಸತ್ಯ ಸಂಶೋಧನೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಸಿಕ್ಕ ಸ್ವಾತಂತ್ರ್ಯ ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಡು, ನುಡಿ, ಜಲ, ಗಡಿ ವಿಧ, ಜಾತಿಯತೆ ಮರೆತು ಸ್ವಾತಂತ್ರ್ಯ ಉಳಿವಿಗೆ ಒಗ್ಗಟ್ಟಿನ ಅವಶ್ಯಕತೆ ವಿದೆ. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಯುವಕರು ಸಂಕಲ್ಪ ಮಾಡಬೇಕು ಎಂದರು.

1857 ದೇಶದ ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಹೇಳುತ್ತೆವೆ. ಅದರೆ ಬಿಹಾರದ ತಿಲಕ್ ಮಾಂಜಿ ಎಂಬ ಬುಡಕಟ್ಟು ಸಮುದಾಯದ ಯುವಕ 1750ರಲ್ಲಿಯೇ ಬುಡಕಟ್ಟು ಜನರ ಮೇಲೆ ಬ್ರಿಟೀಷರ ದಬ್ಬಾಳಿಕೆ ಸಹಿಸದೆ ಆಂಗ್ಲ ಅಧಿಕಾರಿಯನ್ನು ತನ್ನ ಬಿಲ್ಲಿನಿಂದ ಕೊಲ್ಲುವ ಮೂಲಕ ಆಂಗ್ಲರ‌ ವಿರುದ್ಧ ತೊಡೆತಟ್ಟಿದ್ದ. ರಾಮಾಯಣ-ಮಹಾಭಾರತದ ಕಥಾ ರೂಪಕದ ಪ್ರತಿ ಹಂತದಲ್ಲಿಯೂ ವನವಾಸಿ ಸಮುದಾಯ ಕಾಣುತ್ತದೆ. ರಾಮಾಯಣ ಬರೆದ ವಾಲ್ಮೀಕಿ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದರು.

ದೇಶದಲ್ಲಿ ಸುಮಾರು 11 ಕೋಟಿ ಜನ ಬುಡಕಟ್ಟು ಜನಾಂಗವಿದೆ. ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ ನಂಥ ರಾಜ್ಯಗಳಲ್ಲಿ ಆದಿವಾಸಿ ಜನ ಹೆಚ್ಚಾಗಿ ಕಾಣಸಿಗುತ್ತಾರೆ. ಇವರು ಕನಿಷ್ಟ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!