ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯ ಮನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಜೀವ ತೆಗೆದಿರೋ ಟ್ರಾಫಿಕ್ ಹೋಂ ಗಾರ್ಡ್ ಗಂಗರಾಜು ಮಚ್ಚಿನ ಸಮೇತ ಪೀಣ್ಯಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿ ಹೋಂ ಗಾರ್ಡ್ ಗಂಗರಾಜು, ಮನೆಯಲ್ಲಿ ಪತ್ನಿ, ಮಗಳು ಹಾಗೂ ಮತ್ತೊಬ್ಬ ಮಹಿಳೆ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾನೆ. ಇಬ್ಬರು ಹೆಣ್ಣು ಮಕ್ಕಳ ತಲೆಯನ್ನ ಕತ್ತರಿಸಿ ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ. ಹೊರಗೆ ಹೋಗಿದ್ದ ಹೆಂಡತಿ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಪರಿಶೀಲಿಸಿದಾಗ ಒಂದೇ ಮನೆಯಲ್ಲಿ ಮೂವರು ಮಹಿಳೆಯರ ರುಂಡ-ಮುಂಡ ಬೇರೆಯಾಗಿರೋ ಮೃತದೇಹಗಳು ಪತ್ತೆಯಾಗಿದೆ.
ಆರೋಪಿ ಗಂಗರಾಜುಗೆ 42 ವರ್ಷ ವಯಸ್ಸು. ಈತ ಹೆಬ್ಬಗೋಡಿ ಠಾಣೆಯ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. 36 ವರ್ಷದ ಭಾಗ್ಯ ಗಂಗರಾಜು ಪತ್ನಿ. 19 ವರ್ಷದ ಮಗಳು ನವ್ಯಾ ಹಾಗೂ 23 ವರ್ಷದ ಹೇಮಾವತಿ ಮೃತ ಮೂವರು ಮಹಿಳೆಯರು.
ಆರೋಪಿ ಗಂಗರಾಜು ಮುಲತಃ ನೆಲಮಂಗಲದವರು. ಕಳೆದ 6 ವರ್ಷದಿಂದ ಜಾಲಹಳ್ಳಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಗರಾಜು ಒಂದೇ ಕೊಣೆಯಲ್ಲಿ ಮೂವರು ಮಹಿಳೆಯರ ಜೀವ ತೆಗೆದು ಮಚ್ಚಿನ ಸಮೇತ ಪೀಣ್ಯಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಚ್ವಿನಿಂದ ಸಿಕ್ಕ ಸಿಕ್ಕಲ್ಲಿ ಕತ್ತರಿಸಿರುವ ಗಂಗರಾಜು, ಹೆಂಡತಿ ಮೇಲೆ ಅಕ್ರಮ ಸಂಬಂಧದ ಆರೋಪ ಮಾಡಿ ನಾಟಕ ಮಾಡಿದ್ದಾನೆ.
ಮನೆಯಲ್ಲಿ ನಿನ್ನೆ ಗಂಗರಾಜು ಮೇಲೆ ಹೆಂಡತಿ ಮತ್ತು ಇಬ್ಬರು ಯುವತಿಯರು ಜಗಳ ಮಾಡಿದ್ದಾರೆ. ಈ ಜಗಳದಲ್ಲಿ ಮೂವರು ಮಹಿಳೆಯರು ಸೇರಿ ಗಂಗರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಗಂಗರಾಜುಗೆ ಮೂವರು ತಲೆ ಊದಿಕೊಳ್ಳುವಂತೆ ಹೊಡೆದಿದ್ದಾರೆ. ಇಂದು ಮತ್ತೆ ಇಬ್ಬರು ಯುವತಿಯರ ಜೊತೆ ಗಂಗರಾಜು ಗಲಾಟೆ ಮಾಡಿಕೊಂಡಿದ್ದಾನೆ. ಆ ವೇಳೆ ಯುವತಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಸದ್ಯ ಪೀಣ್ಯಾ ಪೊಲೀಸ್ ಠಾಣೆಯಲ್ಲಿರುವ ಆರೋಪಿ ಗಂಗರಾಜು ಅವರನ್ನ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ವಿಚಾರಣೆ ನಡೆಸುತ್ತಿದ್ದಾರೆ.