ಬಿರುಗಾಳಿಗೆ ನೆಲಕ್ಕುರುಳಿತು ಬೃಹತ್​ ವೇದಿಕೆ: ಫರ್ಹಾನ್​ ಅಖ್ತರ್​ ಸಂಗೀತ ಕಾರ್ಯಕ್ರಮ ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್​ ನಟ ಫರ್ಹಾನ್​ ಅಖ್ತರ್ (Farhan Akhtar)​ ಅವರು ಕೇವಲ ನಟನಾಗಿ ಅಲ್ಲದೇ ಗಾಯಕನಾಗಿಯೂ ಫೇಮಸ್​ ಆಗಿದ್ದಾರೆ. ಅವರ ಹಾಡಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಬುಧವಾರ (ಏಪ್ರಿಲ್​ 5) ಇಂಧೋರ್​ನಲ್ಲಿ ಫರ್ಹಾನ್​ ಅಖ್ತರ್ ಅವರು ಕಾರ್ಯಕ್ರಮ ಮಾಡಬೇಕಿತ್ತು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಜೋರಾಗಿ ಬೀಸಿದ ಬಿರುಗಾಳಿಯ (Dust Storm) ಕಾರಣದಿಂದ ಬೃಹತ್​ ವೇದಿಕೆಯೇ ನೆಲಕ್ಕುರುಳಿದೆ. ಸಂಗೀತ ಕಾರ್ಯಕ್ರಮಕ್ಕೆ ತರಲಾಗಿದ್ದ ಸ್ಪೀಕರ್​, ಲೈಟ್ಸ್​ ಮುಂತಾದ ಪರಿಕರಗಳಿಗೆ ಹಾನಿ ಆಗಿದೆ.

ಬನ್ಸಾಲ್​ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಟ್ಸ್​ ಸಲುವಾಗಿ ಫರ್ಹಾನ್​ ಅಖ್ತರ್​ ಅವರು ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಬಿರುಗಾಳಿಯ ಕಾರಣದಿಂದ ಕಾರ್ಯಕ್ರಮ ರದ್ದಾಗಿದೆ. ವಾತಾವರಣ ತಿಳಿಗೊಂಡ ಬಳಿಕ ಏಪ್ರಿಲ್​ 7ರಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ವೇದಿಕೆ ಕುಸಿದು ಬಿದ್ದಿದ್ದರಿಂದ ಯಾರಿಗೂ ಪ್ರಾಣಹಾನಿ ಅಥವಾ ಗಾಯಗಳು ಆಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!