SHOCKING | ತಂಗಿ ಮದುವೆಗೆ ದುಬಾರಿ ಗಿಫ್ಟ್‌ ಕೊಟ್ಟ ಗಂಡ, ಹೊಡೆದು ಸಾಯಿಸಿದ ಪತ್ನಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ತಂಗಿಗೆ ಚಿನ್ನದ ಉಂಗುರ ಹಾಗೂ ಟಿವಿ ಉಡುಗೊರೆ ಕೊಟ್ಟ ಪತಿಯನ್ನು ಪತ್ನಿ ಹಾಗೂ ಆಕೆಯ ಮನೆಯವರು ಸೇರಿ ಕೊಂದಿದ್ದಾರೆ.

ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಘಟನೆ ನಡೆದಿದ್ದು, ಚಂದ್ರ ಪ್ರಕಾಶ್​ ಮಿಶ್ರಾ ಮೃತರು. ಸ್ವಂತ ತಂಗಿಯ ವಿವಾಹದಂದು ಚಂದ್ರ ಪ್ರಕಾಶ್​ ಮಿಶ್ರಾ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದರು. ತಂಗಿಗೆ ಉಡುಗೊರೆ ನೀಡಿದ ಗಂಡನನ್ನು ಕಂಡು ಪತ್ನಿ ಚಾಬಿ ಕೋಪಿಸಿಕೊಂಡಿದ್ದಳು. ಇದೇ ವಿಚಾರಕ್ಕೆ ಜಗಳ ಕೂಡ ನಡೆದಿತ್ತು. ಕೊನೆಗೆ ಪತ್ನಿ ಚಾಬಿ ತನ್ನ ಸಹೋದರ ಬಳಿ ಗಿಫ್ಟ್​ ಕೊಟ್ಟ ವಿಚಾರ ಹೇಳಿದ್ದಾಳೆ.

ಇದೇ ವಿಚಾರವಾಗಿ ಚಾಬಿ ಸಹೋದರನ ಬಳಿ ಚಂದ್ರ ಪ್ರಕಾಶ್​ ಮಿಶ್ರಾನನ್ನು ದೂರಿದ್ದಲ್ಲದೆ, ಸರಿಯಾಗಿ ಪಾಠ ಕಳಿಸಿ ಎಂದು ಹೇಳಿದ್ದಾರೆ. ಅದರಂತೆಯೇ ಪತ್ನಿಯ ಸಹೋದರ ಚಂದ್ರ ಪ್ರಕಾಶ್​ ಮಿಶ್ರಾಗೆ ಮನಬಂದಂತೆ ಥಳಿಸಿದ್ದಾರೆ.

ಚಾಬಿ ಸಹೋದರ ಹೊಡೆದ ಪರಿಣಾಮ ಚಂದ್ರ ಪ್ರಕಾಶ್​ ಮಿಶ್ರಾ ಸಂಪೂರ್ಣ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಿಶ್ರಾ ಮೃತಪಟ್ಟಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!