ಟೆರೇಸ್‌ನಿಂದ ಹಾರಿದ ಪತಿ, ಕಾಪಾಡಲು ಬಂದ ಪತ್ನಿ ಸಾವು, ಪತಿಗೆ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಖನೌನ ಮನೆಯ ಮಹಡಿಯ ಮೇಲಿಂದ ವ್ಯಕ್ತಿಯೊಬ್ಬ ಹಾರಿದ್ದು, ಆತನನ್ನು ಉಳಿಸಲು ಹಾರಿದ ಪತ್ನಿ ಮೃತಪಟ್ಟಿದ್ದಾರೆ.
ಮಹಡಿಯಿಂದ ಜಿಗಿದ ಪತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಖನೌನ ಗಣೇಶ್ ಗಂಜ್ ನಿವಾಸಿ ಸಂದೀಪ್ ಕುಡಿದ ಅಮಲಿನಲ್ಲಿ ಮಹಡಿಯಿಂದ ಜಿಗಿದಿದ್ದಾರೆ. ಪತ್ನಿ ರೋಲಿ ಜತೆ ಜಗಳ ಆಗಿತ್ತು ಎನ್ನಲಾಗಿದೆ.

ಪತಿ ಪತ್ನಿ ಜಗಳ ನಡೆದಿದ್ದು, ಕೋಪದಲ್ಲಿ ಟೆರೇಸ್‌ನಿಂದ ಸಂದೀಪ್ ಹಾರಿದ್ದಾರೆ. ಪತಿಯನ್ನು ರಕ್ಷಿಸಲು ಪತ್ನಿ ರೋಲಿ ಸಹ ಜಿಗಿದಿದ್ದು, ರೋಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!