ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ಇಸ್ತಾನ್‌ಬುಲ್‌ನ ಹೊಟೇಲ್ ಒಂದರಲ್ಲಿ ಬ್ರಿಟನ್ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಅಹ್ಮತ್ ಯಾಸಿನ್ (28)ಎಂಬಾತ ಪತ್ನಿಯನ್ನು ಹೊಟೇಲ್‌ಗೆ ಕರೆಸಿಕೊಂಡಿದ್ದು, 41ಬಾರಿ ಇರಿದಿದ್ದಾರೆ. ಮಹಿಳೆ ಕೂಗಾಟ ಕೇಳಿ ಸಿಬ್ಬಂದಿ ಕೊಠಡಿಗೆ ಧಾವಿಸಿದ್ದು, ರಕ್ತದ ಮಡುವಿನಲ್ಲಿ ಮಹಿಳೆ ಕಂಡುಬಂದಿದ್ದಾರೆ.
ಇಬ್ಬರೂ ಡ್ರಗ್ಸ್ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಇದೇ ಮತ್ತಿನಲ್ಲಿ ಜಗಳ ತಾರಕಕ್ಕೇರಿ ಪತಿ ಹತ್ಯೆ ಮಾಡಿದ್ದಾನೆ. ನಂತರ ಸ್ಕ್ರೂಡ್ರೈವರ್ ನಾಶ ಮಾಡಲು ಪ್ರಯತ್ನಿಸಿದ್ದಾನೆ.
ಸದ್ಯ ಪೊಲೀಸರು ಅಹ್ಮದ್‌ನನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.