ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪತ್ನಿಯನ್ನು ದಪ್ಪ ಇದ್ದೀಯ, ಹೊಟ್ಟೆ ದಪ್ಪ ಇದೆ, ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿ ಮಾತಿನಿಂದ ಖಿನ್ನತೆಗೆ ಜಾರಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನ ಬೈಕುಲ್ಲಾ ನಿವಾಸಿಯಾದ ತೆಹ್ಮಿನಾ ಅಸ್ಲಂ ಕಾಂಡೆ ಮೃತರು. ತೆಹ್ಮಿನಾ ಹಾಗೂ ಪತಿ ಅಸ್ಲಂ ಎಂಟು ವರ್ಷದ ಹಿಂದೆ ವಿವಾಹವಾಗಿದ್ದು, ದಪ್ಪಗಿದ್ದ ಕಾರಣ ತೆಹ್ಮಿನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಎಂಟು ವರ್ಷವಾದರೂ ಮಕ್ಕಳಾಗದಕ್ಕೆ ಅಸ್ಲಾಂ ಪತ್ನಿಯ ತೂಕವನ್ನು ದೂಷಿಸುತ್ತಿದ್ದ. ಮಗುವಿನ ಕಾರಣಕ್ಕಾಗಿ ಇನ್ನೊಂದು ಮದುವೆಯಾಗುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದ. ಇದೆಲ್ಲದರಿಂದ ಬೇಸತ್ತ ತೆಹ್ಮಿನಾ ಖಿನ್ನತೆಗೆ ಜಾರಿದ್ದರು.
ತೆಹ್ಮಿನಾ ಪೋಷಕರು ಪತಿಯಿಂದಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.