ಹೊಸದಿಗಂತ ವರದಿ, ಕಲಬುರಗಿ
ಮಹಿಳೆಯೋರ್ವಳು ವಿಷ ಕುಡಿದು ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ನಡೆದಿದೆ.
ಲಾಲ್ ಬಿ (35) ಸಾವನ್ನಪ್ಪಿದ ಮಹಿಳೆ.ಹಣದ ಆಸೆಗೆ ಲಾಲ್ ಬಿಯನ್ನು ಗಂಡ ಖಾಸಿಂ ಸಾಬ್ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಲಾಲ್ ಬಿ ಕುಟುಂಬಸ್ಥರ ಆರೋಪಿಸಿದ್ದಾರೆ.
ಮನೆಯಲ್ಲಿ ಪದೆ ಪದೇ ಕಳ್ಳತನ ಮಾಡುತ್ತಿದ್ದಾಳೆ ಎಂದು ಲಾಲ್ ಬಿ ಮೇಲೆ ಗಂಡನ ಮನೆಯವರು ಕಳ್ಳತನ ಆರೋಪ ಹೊರಿಸುತ್ತಿದ್ದರು. ಮತ್ತೊಂದು ಮದುವೆ ಮಾಡಿಕೊಳ್ಳುತ್ತೆನೆ ಎಂದು ಗಂಡ ಖಾಸಿಂ ಕಿರುಕುಳ ನೀಡುತ್ತಿದ್ದ. ನಿನ್ನೆ ಮನೆಯಲ್ಲಿ ವಿಷ ಕುಡಿಸಿ ಲಾಲ್ ಬಿ ಕೊಲೆಗೈದಿದ್ದಾರೆ ಎಂದು ಮೃತ ಲಾಲ್ ಬಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಸಬರ್ ಬನ್ ಪೊಲೀಸದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.