ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿಯ ಜೊತೆ ಜಗಳವಾಡಿಕೊಂಡು ಬಂದು ರೈಲ್ವೆ ಹಳಿ ಮೇಲೆ ಪತ್ನಿ ಕುಳಿತಿದ್ದಳು, ಪತ್ನಿಯನ್ನು ಸಂತೈಸುತ್ತಾ ಪತಿಯೂ ರೈಲ್ವೆ ಹಳಿ ಮೇಲೆ ಕುಳಿತಿದ್ದ, ವೇಗವಾಗಿ ಬಂದ ರೈಲು ಇಬ್ಬರ ಮೇಲೂ ಹರಿಯಿತು…
ಹೌದು, ಈ ಮನಕಲುಕುವ ಘಟನೆ ನಡೆದಿದ್ದು ವಾರಣಾಸಿಯಲ್ಲಿ. ಮದ್ಯ ವ್ಯಸನಿಯಾಗಿದ್ದ ಗಂಡನಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿ ಮೇಲೆ ಕುಳಿತಿದ್ದಳು. ಪತಿ ಸಮಾಧಾನಿಸಿ, ಸಂತೈಸಿ ಆಕೆಯನ್ನು ತಬ್ಬಿದ್ದ ವೇಳೆ ರೈಲು ಬಂದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.
ಪಂಚಕೋಶಿ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಗೋವಿಂದ್ ಸೋಂಕರ್ ಹಾಗೂ 28 ವರ್ಷದ ಖುಷ್ಬು ಸೋಂಕರ್ ಮೃತರು.
ಕುಡಿದು ಬಂದಿದ್ದ ಪತಿ, ಪತ್ನಿಯ ಜೊತೆ ಭಾರೀ ಜಗಳವಾಡಿದ್ದ ಸಿಟ್ಟಿನಲ್ಲಿ ಹೆಂಡತಿ ರೈಲ್ವೆ ಹಳಿ ಬಳಿ ಓಡಿಹೋಗಿದ್ದಳು. ಹೆದರಿದ ಪತಿ ಆಕೆಯ ಹಿಂದೆಯೇ ಓಡಿ ಹೋಗಿದ್ದಾನೆ. ಆಕೆಯನ್ನು ಸಮಾಧಾನಿಸಿ ಮನೆಗೆ ಹೊರಡುತ್ತಿದ್ದ ವೇಳೆ ಅವಗಢ ಸಂಭವಿಸಿದೆ.