March 6, 2026
Friday, March 6, 2026
spot_img

ಸೌದಿ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರತೀಯರ ಹವಾ: ಹೊಸ ಮೂವಿಯಲ್ಲಿ ಸಲ್ಲು, ಸಂಜಯ್ ದತ್ ಆಕ್ಟಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೌದಿಯ ಸಿನಿಮಾದಲ್ಲಿ ಭಾರತದ ಸ್ಟಾರ್ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ನಟಿಸುತ್ತಿದ್ದಾರೆ.

ಸೌದಿ ಚಿತ್ರರಂಗದಲ್ಲಿ ನಿರ್ಮಾಣಗೊಂಡಿರುವ ‘ದಿ ಸೆವೆನ್ ಡಾಗ್ಸ್’ ಹೆಸರಿನ ಆಕ್ಷನ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ನಟಿಸಿದ್ದಾರೆ.

ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಸಲ್ಮಾನ್ ಮತ್ತು ಸಂಜಯ್ ದತ್ ಅವರುಗಳು ಟ್ರೈಲರ್​​ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಸಲ್ಮಾನ್ ಹಾಗೂ ಸಂಜಯ್ ಅವರು ಸಹ ಸಖತ್ ಪವರ್​​ಫುಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಸೂಪರ್ ಹಿಟ್ ಆಗಿದ್ದ ಸೌದಿ ಸಿನಿಮಾ ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಸಿನಿಮಾ ನಿರ್ದೇಶಿಸಿದ್ದ ಅದಿಲ್ ಇಲ್ ಅರಬ್ಬಿ ಮತ್ತು ಬಿಲಾಲ್ ಫಲಾಹ್ ಅವರುಗಳು ನಿರ್ದೇಶನ ಮಾಡಿರುವ ‘ದಿ ಸೆವೆನ್ ಡಾಗ್ಸ್’ ಸಿನಿಮಾನಲ್ಲಿ ಸಲ್ಮಾನ್ ಮತ್ತು ಸಂಜಯ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ನಾಯಕ ಪಾತ್ರದಲ್ಲಿ ಇಜಿಪ್ಟಿಯನ್ ನಟ ಕರೀಮ್ ಅಬ್ದಿಲ್ ಅಜೀಜ್ ಮತ್ತು ಅಹ್ಮದ್ ಇಜ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಹಾಲಿವುಡ್ ಸ್ಟಾರ್ ನಟಿ ಮೋನಿಕಾ ಬೆಲೂಚಿ.

ಇದೊಂದು ಅದ್ಧೂರಿ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸಖತ್ ಚೇಸಿಂಗ್ ಮತ್ತು ಆಕ್ಷನ್ ಸಿನಿಮಾಗಳಿದ್ದು ಅವುಗಳ ತುಣುಕುಗಳನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ತಿಂಗಳು ಬಾಕಿ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !