ಜಿಲ್ಲಾಧಿಕಾರಿಗಳ ಕಚೇರಿ ಆವರಣ ಸ್ವಚ್ಛಗೊಳಿಸಿ ಸಾಮಾಜಿಕ ಬದ್ಧತೆ ತೋರಿದ ಇನ್ಸ್ ಪೆಕ್ಟರ್!

ಹೊಸದಿಗಂತ ವರದಿ, ಕಲಬುರಗಿ:

ಕಾಂಗ್ರೆಸ್ ಪಕ್ಷದ ನಾಯಕರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೆಟೆ ಹೋಗಿದ್ದ ತೊಗರಿ ಸಮೇತ ಪ್ರತಿಭಟನೆ ನಡೆಸಿ, ನಂತರ ಕಚೇರಿ ಆವರಣದಲ್ಲಿ ತೊಗರಿ ಗಿಡಗಳನ್ನು ಹಾಗೆ ಬಿಟ್ಟು ಹೋಗಿದ್ದನ್ನು ಪೊಲೀಸ್ ಇನ್ಸಪೆಕ್ಟರ್ ಪಂಡಿತ್ ಸಗರ್ ಅವರು ಸ್ವಚ್ಚಗೊಳಿಸಿ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರವಾಗಿದೆ.

ಬುಧುವಾರ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹನಿಯಾಗಿದ್ದು, ಈ ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ನಾಯಕರು ರೈತರೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೆಟೆ ಹೋಗಿದ್ದ ತೊಗರಿ ಸಮೇತ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಂತರ ತೊಗರಿ ಗಿಡಗಳನ್ನು ಹಾಗೆ ಬಿಟ್ಟುಹೋಗಿದ್ದರು. ಅದನ್ನು ಗಮನಿಸಿದ ಅಶೋಕ ನಗರ ಠಾಣೆಯ ಸಿಪಿಐ ಪಂಡಿತ್ ಸಗರ ಹಾಗೂ ಅವರ ಜತೆ ಪೊಲೀಸ್ ಸಿಬ್ಬಂದಿಗಳು ಕಚೇರಿ ಆವರಣದಲ್ಲಿ ತೊಗರಿ ಗಿಡಗಳನ್ನು ತೆಗೆದು, ಕಸಗೂಡಿಸಿ ಸ್ವಚ್ಛಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!